ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಳಗ್ಗೆ 5ರಿಂದ ರಾತ್ರಿ 8ರ ವರೆಗೆ ಬಿಬಿಎಂಪಿ ಪಾರ್ಕ್‌ಗೆ ಪ್ರವೇಶಾವಕಾಶ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳನ್ನು ವಾಯು ವಿಹಾರಕ್ಕೆಂದು ಪ್ರತಿ ದಿನ ಬೆಳಗ್ಗೆ 5.00 ರಿಂದ 10.00 ರವರೆಗೆ ಹಾಗೂ ಸಂಜೆ 4.00 ರಿಂದ ರಾತ್ರಿ 8.00 ರವರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು.

ಇನ್ನು ಮುಂದೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲೆಂದು ಸಮಯವನ್ನು ಮಾರ್ಪಡಿಸಿ ಬೆಳಗ್ಗೆ 5.00 ರಿಂದ ರಾತ್ರಿ 8.00 ರವರೆಗೆ ಅವಕಾಶ ಕಲ್ಪಿಸಿಕೊಟ್ಟು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದಾರೆ. ಉದ್ಯಾನವನಗಳ ನಿರ್ವಹಣೆಗಾಗಿ ಬೆಳಗ್ಗೆ 10 ರಿಂದ ಮದ್ಯಾಹ್ನ 1.30 ರವರೆಗೆ ಸಮಯವನ್ನು ನಿಗದಿಪಡಿಸಿ ಆದೇಶಿಸಲಾಗಿದೆ. ಉದ್ಯಾನವನಗಳ ನಿರ್ವಹಣೆಯ ಸಮಯದಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

15/07/2022 10:38 am

Cinque Terre

1.75 K

Cinque Terre

0

ಸಂಬಂಧಿತ ಸುದ್ದಿ