ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೋಡ್ ಡಿವೈಡರ್ ಹತ್ತಿ ಪೋಲ್‌ಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ.!

ವರದಿ: ಗೀತಾಂಜಲಿ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ರೋಡ್ ಡಿವೈಡರ್ ಹತ್ತಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಾಗಡಿ ರೋಡ್‌ನ ಅಂಡರ್‌ ಪಾಸ್‌ನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರೂಟ್ ನಂಬರ್ 401 ಬಸ್‌ ಅಪಘಾತವಾಗಿದ್ದು, ಬಸ್‌ನ ಎಡ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಬಸ್‌ ಡಿಕ್ಕಿ ಹೊಡೆದ ಪರಿಣಾಮ ಪೋಲ್ ಮಕಾಡೆ ಮಲಗಿದೆ. ಬಸ್‌ನಲ್ಲಿರುವ ಪ್ರಯಾಣಿಕರು ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಬಸ್‌ನಲ್ಲಿದ್ದವರ ಪ್ರಾಣ ಪಕ್ಷಿ ಹಾರಿ ಹೋಗುತ್ತಿತ್ತು. ಒಂದು ಬದಿಯ ರಸ್ತೆ ಕ್ಲೋಸ್ ಆಗಿದ್ದರಿಂದ ಭಾರಿ ಅನಾಹುತ ತಪ್ಪಿದೆ.

Edited By :
PublicNext

PublicNext

14/07/2022 05:01 pm

Cinque Terre

36.02 K

Cinque Terre

0

ಸಂಬಂಧಿತ ಸುದ್ದಿ