ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವೆಡೆ ಕಾಮಗಾರಿಗಳು ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ಕಡಿತ ಸಾಮಾನ್ಯ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಇದು ಜನರನ್ನು ಹೈರಾಣಾಗಿಸಲಿದೆ.
ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟಾಗುತ್ತದೆ. ಬೆಸ್ಕಾಂ ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ. ಇಂದು ಬೆಂಗಳೂರಿನಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ವಿದ್ಯುತ್ ಕಡಿತ ಗೊಳಿಸುವ ಸಾದ್ಯತೆಗಳಿವೆ.
Kshetra Samachara
14/07/2022 08:24 am