ಬೆಂಗಳೂರು: ಬಿಟಿಎಂ ಲೇಔಟ್‌ನಲ್ಲಿ ಇದೇ ತಿಂಗಳ 4ನೇ ತಾರೀಕಿನಂದು ಭಾನುವಾರ ಸಂಜೆ ಬೃಹದಾಕಾರದ ಆಲದ ಮರ ರೆಂಬೆ ಮುರಿದು ಬಿದ್ದಿತ್ತು. ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ಕೂಡ ಸೇರಿದ್ದರು. ಇದೇ ಘಟನೆಯಲ್ಲಿ ದೀಕ್ಷಿತ್ ಎಂಬ ಐದು ವರ್ಷದ ಬಾಲಕ ತಲೆಗೆ ಗಂಭೀರವಾದ ಗಾಯವಾಗಿತ್ತು. ದೀಕ್ಷಿತ್ ಪ್ರಜ್ಞೆ ಕಳೆದುಕೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಪ್ರಜ್ಞೆ ಬಂದ ಬಳಿಕ ಬಾಲಕನಿಗೆ ಎಲ್ಲಾ ಸಂಪೂರ್ಣವಾಗಿ ಮರೆತು ಹೋಗಿತ್ತು. ತನ್ನ ತಂದೆ ತಾಯಿಯನ್ನು ಕೂಡ ಆತ ಗುರುತಿಸಲಿಲ್ಲ. ಆದರೆ ಈಗ ನಿಧಾನವಾಗಿ ಬಾಲಕನಿಗೆ ಎಲ್ಲಾ ನೆನಪು ಬರುತ್ತಿದೆ.
ಒಂದು ದಿನ ಕಳೆದ ನಂತರ ದೀಕ್ಷಿತ್ ತನ್ನ ತಂದೆ ತಾಯಿಯನ್ನು ಗುರುತಿಸಿದ. ಆದರೂ ಈಗಲೂ ಕೂಡ ದೀಕ್ಷಿತ್‌ಗೆ ತನ್ನ ಬಂಧು ಬಳಗ ಸ್ನೇಹಿತರು ಯಾರು ನೆನಪಿಗೆ ಬರುತ್ತಿಲ್ಲ. ಇನ್ನು ದೀಕ್ಷಿತನ ತಂದೆ ಬಡವರಾಗಿದ್ದು ಖಾಸಗಿ ಆಸ್ಪತ್ರೆಯ ಬಿಲ್ ಕಟ್ಟಲು ಸಾಲ ಸೂಲ ಮಾಡಿ ಮಗನನ್ನು ಉಳಿಸಿಕೊಂಡಿದ್ದಾರೆ. ಆಸ್ಪತ್ರೆ ಬಿಲ್ ಕಟ್ಟುತ್ತೇವೆ ಎಂದು ಭರವಸೆ ನೀಡಿದ ಬಿಬಿಎಂಪಿ ಅಧಿಕಾರಿಗಳು ಯಾವುದೇ ಬಿಲ್ ಕಟ್ಟದ ಕಾರಣ ದೀಕ್ಷಿತನ ತಂದೆಗೆ ಕೂಡಲೇ ಹಣ ಕಟ್ಟುವಂತೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ದೀಕ್ಷಿತ್ ತಂದೆ ಕೂಡಲೇ ಸಾಲ ಮಾಡಿ ಆಸ್ಪತ್ರೆಗೆ ಈವರೆಗೂ 1,30,000 ರೂಪಾಯಿ ಕಟ್ಟಿದ್ದಾರೆ.
ಘಟನೆ ನಡೆದ ದಿನ ದೀಕ್ಷಿತನ ಜೊತೆ ತನ್ನ ಚಿಕ್ಕಮ್ಮ ಕೂಡ ಗಾಯಗೊಂಡಿದ್ದರು. ಅವರು ಘಟನೆ ಹೇಗಾಯಿತು ಎಂದು ವಿವರಿಸಿದ್ದಾರೆ.
ಈಗಾದರೂ ಬಿಬಿಎಂಪಿ ಅಧಿಕಾರಿಗಳು ದೀಕ್ಷಿತನ ಆಸ್ಪತ್ರೆ ಖರ್ಚನ್ನು ಬರಿಸಿ ಈ ಬಡ ಕುಟುಂಬಕ್ಕೆ ಸಹಾಯ ಮಾಡಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
13/07/2022 10:37 pm