ವರದಿ- ಗಣೇಶ್ ಹೆಗಡೆ
ಬೆಂಗಳೂರು : ಸಾರಿಗೆ ಮುಷ್ಕರದ ನಂತರ ಬಿಎಂಟಿಸಿಯಲ್ಲಿ ದಿನದಿಂದ ದಿನಕ್ಕೆ ಅಧಿಕಾರಿಗಳ ಕಿರುಕುಳ ಹೆಚ್ಚಾಗ್ತಾನೆ ಇದೆ. ನೌಕರರು ಕೂತ್ರು ತಪ್ಪು ನಿಂತ್ರು ತಪ್ಪು ಅನ್ನೋ ಹಾಗಾಗಿದೆ ಪರಿಸ್ಥಿತಿ. ಟಿಕೆಟ್ ಕೊಡುವ ವೇಳೆ ಒಂದು ರುಪಾಯಿ ಹೆಚ್ಚಾಗಿದಕ್ಕೆ, ಆಫೀಸರ್ ಬಂದಾಗ ಪ್ರಯಾಣಿಕರಿಗೆ ಟಿಕೆಟ್ ಕೊಟ್ಟ ಎಂಬ ಕಾರಣಕ್ಕೆ ಹಾಗೂ ಆರೋಗ್ಯದ ಕಾರಣಕ್ಕಾಗಿ ರಜೆ ಹಾಕಿದ್ದಕ್ಕೆ ಕಂಡಕ್ಟರ್ ಡ್ರೈವರ್ ಗಳಿಗೆ ಡಿಸ್ಮಿಸ್ ಮತ್ತು ಸಸ್ಪೆಂಡ್ ಮಾಡಲಾಗ್ತಿದೆ.
ತಿಂಗಳಿಗೆ ನೂರು ಜನರಂತೆ ಏಳು ತಿಂಗಳಿಗೆ ಏಳು ನೂರು ಜನರಂತೆ ಜನವರಿಯಿಂದ ಜುಲೈ ವರೆಗೆ ಬರೋಬ್ಬರಿ ಏಳು ನೂರು ನೌಕರರನ್ನು ಡಿಸ್ಮಿಸ್ ಮತ್ತು ಸಸ್ಪೆಂಡ್ ಮಾಡಲಾಗಿದೆ.
ಇದರಿಂದ ನೌಕರರು ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸ್ತಿದ್ದಾರೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
PublicNext
13/07/2022 08:38 pm