ಬೆಂಗಳೂರು: ಬೇಲಿಮಠದ ರಸ್ತೆಯಿಂದ ಶಾಂತಲಾ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 7ರಿಂದ ಗೂಡ್‌ಶೆಡ್ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ. ಮೈಸೂರು ರಸ್ತೆಯಿಂದ ಮೆಜಸ್ಟಿಕ್ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಾಮಗಾರಿ ಹಿನ್ನೆಲೆಯಲ್ಲಿ 2022 ರ ಏಪ್ರಿಲ್ 15ರಿಂದ ಇಲ್ಲಿಯವರೆಗೆ ಮುಚ್ಚಲಾಗಿತ್ತು.
ವೈಟ್ ಟಾಪಿಂಗ್ ಯೋಜನೆಯಡಿ ಗೂಡ್‌ಶೆಡ್ ರಸ್ತೆಯನ್ನು ಸುಮಾರು 11.88 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬಿಜಿಎಸ್ ಫ್ಲೈಓವರ್, ಅಂಬೇಡ್ಕರ್ ಡೌನ್ ಲ್ಯಾಂಪ್‌ನಿಂದ ಡಾ.ಟಿಸಿಎಂ ರಾಯನ್ ರಸ್ತೆ ಮಾರ್ಗವಾಗಿ ಶಾಂತಲಾ ಜಂಕ್ಷನ್‌ವರೆಗೆ ಎರಡು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.
Kshetra Samachara
05/07/2022 08:13 pm