ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇನ್ಮುಂದೆ ನಿರ್ವಾಹಕ ಇಲ್ಲದೇ ಓಡಲಿವೆ ಬಿಎಂಟಿಸಿ ಬಸ್‌ಗಳು

ಬೆಂಗಳೂರು: ಸದ್ಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸದ್ಯ ತೀವ್ರ ಸಂಕಷ್ಟ ಎದುರಿಸುತ್ತಿದೆ. ಇರುವ ಉದ್ಯೋಗಿಗಳಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡುತ್ತಿದೆ. ಈ ಹಿನ್ನಲೆಯಲ್ಲಿ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನು ಮೇಲೆತ್ತಲು ಅಡಳಿತ ಮಂಡಳಿ ಹೊಸ ಪ್ಲಾನ್ ರೆಡಿ ಮಾಡಿದೆ.

ಹೊಸ ಪ್ಲಾನ್ ಪ್ರಕಾರ ಬಸ್ ಗಳಲ್ಲಿ ಡ್ರೈವರ್ ಮಾತ್ರ ಇರಲಿದ್ದು ಕಂಡೆಕ್ಟರ್ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಕಂಡಕ್ಟರ್ ರಹಿತ ಸೇವೆ ನೀಡಲು ಬಿಎಂಟಿಸಿ ನಿರ್ಧರಿಸಿದೆ. ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ ಜೊತೆ ಜೊತೆಗೆ ಡ್ರೈವರ್‌ಗಳ ಕೊರತೆಯೂ ಕಾಡುತ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ಕಂಡಕ್ಟರ್ ಹುದ್ದೆಗಳನ್ನೇ ತೆಗೆದು ಹಾಕಲು ನಿಗಮ ಪ್ಲಾನ್ ಮಾಡಿದೆ.

ಟಿಕೆಟ್ ಹಣ ಪಾವತಿ ಡಿಜಟಲೈಸ್:

ಸದ್ಯ ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಆರಂಭವಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಸೌಲಭ್ಯಗಳ ಮೂಲಕ ಟಿಕೆಟ್ ವಿತರಣೆಯನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ನಿಗಮದಲ್ಲಿರುವ ಎಲ್ಲ ನಿರ್ವಾಹಕರು ಕೆಲಸದಿಂದ ಮುಕ್ತರಾಗಲಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲರೂ ಡ್ರೈವರ್ಸ್:

ಈಗ ಇರುವ ಪ್ರತಿಯೊಬ್ಬ ನಿರ್ವಾಹಕರು ನಿರ್ವಾಹಕ ಕಂ ಚಾಲಕ ಆಗಿ ನೇಮಕವಾದವರು. ಈ ಎಲ್ಲ ನಿರ್ವಾಹಕರನ್ನ ಡ್ರೈವಿಂಗ್‌ಗೆ ನಿಯೋಜಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್‌ಗಳನ್ನ ರಸ್ತೆಗಿಳಿಸಲಿದ್ದೇವೆ ಎಂದು ನಿಗಮ ತಿಳಿಸಿದೆ.

2 ವರ್ಷದಲ್ಲಿ ಎಲ್ಲಾ ಬಸ್‌ಗಳೂ ಕಂಡಕ್ಟರ್ ಲೆಸ್:

ಸದ್ಯದ ಪರಿಸ್ಥಿತಿಯಲ್ಲಿ ಕಂಡೆಕ್ಟರ್ ಇಲ್ಲದೇ ಬಸ್ ಊಹಿಸುವುದು ಅಸಾಧ್ಯ. ಹೆಚ್ಚಿನ ಮಂದಿಗೆ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳಲು ಸಮಯ ಬೇಕಾಗಲಿದೆ. ಹೊರೆ ತಪ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಮುಂದಿನ ಒಂದೆರಡು ವರ್ಷದಲ್ಲಿ ಶೇಕಡಾ 100ರಷ್ಟು ಕಂಡಕ್ಟರ್ ಲೆಸ್ ಬಸ್ ರಸ್ತೆಗಿಳಿಯಬೇಕು ಎನ್ನುವುದು ಸದ್ಯದ ಲೆಕ್ಕಾಚಾರವಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದಂತೆ:

ಆದರೆ ಈ ಯೋಜನೆ ಮತ್ತೊಂದಿಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ. ಅಲ್ಲದೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ ಎಂದು ಸಾರಿಗೆ ಮುಖಂಡ ಅನಂತಸುಬ್ಬರಾವ್ ದೂರಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

05/07/2022 07:44 pm

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ