ವರದಿ- ಬಲರಾಮ್ ವಿ
ಬೆಂಗಳೂರು: ಕೃಷ್ಣರಾಜಪುರಂ ರೈಲು ನಿಲ್ದಾಣದ ಮೇಲೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಿರ್ಮಿಸಲಾದ ಕೇಬಲ್ ಸ್ಟ್ರೇಯ್ಡ್ ಸೇತುವೆಯು ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಡೆಗೋಡೆಗಳು ಕುಸಿಯುತ್ತಿದೆ.
ಕೆಆರ್ ಪುರದ ಟಿನ್ ಫ್ಯಾಕ್ಟರಿಯಿಂದ ಪ್ರಾರಂಭವಾಗಿ ಐಟಿಐ ಗೇಟ್ ನವರೆಗೆ ಇರುವ ಈ ಸೇತುವೆಯು 2003ರಲ್ಲಿ ಅಂದಿನ ಪ್ರಧಾನಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದು ಒಂದೂವರೆ ಕಿಲೋ ಮೀಟರ್ ನ ಸೇತುವೆಯಾಗಿದೆ.
ಈ ಸೇತುವೆಯು ದೇಶದ ಎರಡನೇ ಅತಿದೊಡ್ಡ ತೂಗು ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊರ ರಾಜ್ಯಗಳಿಗೂ ಸಂಪರ್ಕವನ್ನು ಕಲ್ಪಿಸುವ ಈ ಸೇತುವೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಂಪೌಂಡ್ ಕುಸಿಯುತ್ತಿದ್ದು, ಹಾಗೂ ಸೇತುವೆಯ ಎರಡು ಬದಿಯಲ್ಲಿ ಗಿಡಗಂಟೆಗಳು ಬೆಳೆದು ಸೇತುವೆಗೆ ಮಾರಕವಾಗುತ್ತಿವೆ.
ಪ್ರತಿದಿನ ಸೇತುವೆಯ ಮೂಲಕ ಸಾವಿರಾರು ಭಾರಿ ಗಾತ್ರದ ವಾಹನಗಳು ಚಲಿಸುತ್ತವೆ.. ಅದಷ್ಟೂ ಬಿಬಿಎಂಪಿ ಅಧಿಕಾರಿಗಳು ಗಮನಹರಿಸದಿದ್ದರೆ ಅನಾಹುತ ಎದುರಿಸುವಂತಾಗಿದೆ.
PublicNext
28/06/2022 08:13 pm