ವರದಿ - ಗಣೇಶ್ ಹೆಗಡೆ
ಬೆಂಗಳೂರು:ದಿನದಿಂದ ದಿನಕ್ಕೆ ನಮ್ಮ ಮೆಟ್ರೋ ಬೆಂಗಳೂರಿನ ಜನರ ಪಾಲಿಗೆ ಆಪ್ತವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಜನರಿಗೆ ಸ್ನೇಹಿಯಾಗಿರುವ ನಮ್ಮ ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಮಧ್ಯೆ ಇದುವರೆಗೂ ಪೈಲಟ್ ಸಹಿತವಾಗಿ ಚಲಿಸುತ್ತಿದ್ದ ನಮ್ಮಮೆಟ್ರೋವನ್ನು ಇನ್ಮುಂದೆ ಪೈಲಟ್ ರಹಿತವಾಗಿ ಚಲಿಸಲು ಸಿದ್ಧವಾಗುತ್ತಿದೆ.
ಹೌದು ಇದುವರೆಗೂ ಬೆಂಗಳೂರಿನಲ್ಲಿ ಸಂಚರಿಸಿದ ನಮ್ಮ ಮೆಟ್ರೊ ರೈಲುಗಳಿಗೆ ಪೈಲೆಟ್ ಇರ್ತಿದ್ದರು. ಆದರೆ ಇನ್ಮುಂದೆ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಟ್ರಾಕ್ ಮೇಲೆ ಇಳಿಯಲಿದೆ. ಈ ರೈಲುಗಳನ್ನು ನಿಯಂತ್ರಣ ಕೊಠಡಿಯಿಂದ್ಲೇ ನಿಯಂತ್ರಿಸುವ ವ್ಯವಸ್ಥೆಯೂ ಜಾರಿಗೆ ಬರಲಿದೆ.
ಮೆಟ್ರೋ ಚಾಲಕನ ತಪ್ಪುಗಳಿಂದ ನಗರದಲ್ಲಿ ಆಗಾಗ ಟ್ರೇನ್‌ಗಳು ಸ್ಥಗಿತವಾಗ್ತಿತ್ತು. ಇದೀಗ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ತಯಾರಿ ನಡೆಸಿದ್ದು, ಪೈಲೆಟ್ ರಹಿತ ನಮ್ಮ ಮೆಟ್ರೋ ಕಾರ್ಯಾಚರಣೆಗೊಳಿಸಲು ಸಕಲ ಸಿದ್ದತೆ ನಡೆದಿದೆ.
PublicNext
20/06/2022 02:37 pm