ಬೆಂಗಳೂರು: ಕೆಂಗೇರಿ ಹತ್ತಿರ ಇರುವ ಉಲ್ಲಾಳ್ ವಾರ್ಡ್ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼ ಈ ಹಿಂದೆ ಕಸ, ರಸ್ತೆ, ನೀರಿನ ಸಮಸ್ಯೆ ಬಗ್ಗೆ ವಿಶೇಷ ವರದಿ ಮಾಡಿತ್ತು. ಸಮಸ್ಯೆಗಳ ಮೂಟೆಯೇ ಕಾಡ್ತಿದ್ದ ಜನಕ್ಕೆ ಈಗ ಒಂದೇ ದಿನದಲ್ಲಿ ಮುಕ್ತಿ ಸಿಕ್ಕಿದೆ! ಹೌದು... ಕಸವೇ ಇಲ್ಲ, ರಸ್ತೆಗಳಲ್ಲಿ ಗುಂಡಿಗಳಿಲ್ಲ ಅಂತ ಜನ್ರು ಆಶ್ಚರ್ಯ ಪಡ್ತಿದ್ದಾರೆ. ಹಾಗಾದ್ರೆ, ನಿಜವಾಗ್ಲೂ ಜನಪ್ರತಿನಿಧಿಗಳಿಗೆ ಜನರ ಕೂಗು ಇಷ್ಟು ಬೇಗ ಮುಟ್ಟಿತಾ! ಏನಿದು ಆಶ್ಚರ್ಯ ಅಂತೀರಾ? ಮುಂದೆ ನೋಡಿ...
ಕರೆಕ್ಟ್ ಸ್ವಾಮಿ, ವಾಸ್ತವತೆ ಏನಂದ್ರೆ... ಈ ವಾರ್ಡ್ ಜನರ ಕೂಗು ಸ್ಥಳೀಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕೇಳಿಸಿರಲಿಲ್ಲ. ಆದ್ರೆ, ಪ್ರಧಾನಮಂತ್ರಿಯವ್ರಿಗೆ ಕೇಳಿಸಿದೆ ಅನ್ನಿಸುತ್ತೆ. "ನಾನು ಜೂ. 20ರಂದು ಬರ್ತಿದ್ದೀನಿ, ಅಷ್ಟರಲ್ಲಿ ಉಲ್ಲಾಳ್ ವಾರ್ಡ್ ಪೂರ್ತಿ ಕ್ಲೀನ್ ಆಗಬೇಕು. ಎಲ್ಲೂ ಪ್ಲಾಸ್ಟಿಕ್ ಇರಬಾರದು, ರೋಡ್ ಗುಂಡಿಗಳನ್ನೆಲ್ಲ ಮುಚ್ಚಬೇಕು" ಅಂತ ಹೇಳಿರಬೇಕು. ಅವರು ಹೇಳಿದ್ದೇ ತಡ ರಸ್ತೆಗಳಲ್ಲಿ ಒಂಚೂರು ಧೂಳೇ ಇಲ್ಲದ ಹಾಗೇ ಎಲ್ಲವೂ ಕ್ಲೀನ್ ಕ್ಲೀನ್...!
ಇನ್ನೇನು ಸ್ವಾಮಿ, ಹೇಳೋದು? ಸ್ಥಳೀಯರು ಎಷ್ಟೆಲ್ಲ ದೂರು ಕೊಟ್ರೂ, ಕಿವಿಗೆ ಹಾಕಿಕೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳು ಇವತ್ತು ಪಿಎಂ ಬರ್ತಿದ್ದಾರೆ ಎಂದಾಕ್ಷಣ ಕ್ಲೀನ್ ಮಾಡಿಸುತ್ತಿದ್ದಾರೆ. ಮೊದಲಿಗೆ ರಸ್ತೆಪೂರ್ತಿ ಕಸ-ತ್ಯಾಜ್ಯ ಸಹಿತ ಪ್ಲಾಸ್ಟಿಕ್ ಗಳೇ ರಾರಾಜಿಸುತ್ತಿತ್ತು.
ಹೊಂಡಾಗುಂಡಿಗಳಿಂದ ಕೂಡಿದ್ದ ರಸ್ತೆಗೆ ಈಗ ಜಲ್ಲಿ ಹಾಕಿಸಿ, ಟಾರ್ ಹಾಕುತ್ತಿದ್ದಾರೆ. ರಸ್ತೆಯಂಚಿನ ಕೊಂಬೆಗಳನ್ನೆಲ್ಲ ಕಟಾವು ಮಾಡಿಸುತ್ತಿದ್ದಾರೆ. ರಸ್ತೆ ಬದಿ ಸ್ವಚ್ಛವೋ ಸ್ವಚ್ಛ! ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಅಂದ್ರೆ ಇದೇ ಅಲ್ವೇ ಮತ್ತೆ?
- ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
16/06/2022 08:40 pm