ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನ ಜಾಗದಲ್ಲಿ ರಸ್ತೆ ನಿರ್ಮಿಸುತ್ತಿರುವುದಕ್ಕೆ ಸ್ಥಳೀಯರು ತಡೆ ಒಡ್ಡಿ ಪ್ರತಿಭಟನೆ ನಡೆಸಿದರು.
ರಾಜರಾಜೇಶ್ವರಿ ನಗರದಿಂದ ಉತ್ತರಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿ ಸುವ ಕೆಂಚೇನಹಳ್ಳಿ ರಸ್ತೆಗೆ ಹೊಂದಿಕೊಂಡಂತೆ ಸ್ಮಶಾನ ಇದೆ. ಆ ಜಾಗವನ್ನು ರಸ್ತೆ ವಿಸ್ತರಣೆಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಜೆಸಿಬಿ ಮೂಲಕ ಆರಂಭವಾದ ಕೆಲಸವನ್ನು ತಡೆದ ಸ್ಥಳೀಯರು ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡೋದಿಲ್ಲ ಎಂದು ಪಟ್ಟು ಹಿಡಿದರು. ಹಲಗೆವಡೆರಹಳ್ಳಿ ಗ್ರಾಮ ವ್ಯಾಪ್ತಿ ಯಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ 2 ಏಕರೆ ಜಾಗದಲ್ಲಿ ಸ್ಮಶಾನ ವಿತ್ತು. ಒತ್ತುವರಿಯಾಗಿ ಇದೀಗ ಅರ್ಧ ಏಕರೆ ಜಾಗ ಮಾತ್ರ ಉಳಿದಿದೆ. ಅದನ್ನು ರಸ್ತೆಗೆ ಅಂತಾ ಬಳಿಸಿಕೊಂಡ್ರೆ ಸ್ಮಶಾನವೇ ಇಲ್ಲದಂತಾಗುತ್ತದೆ ಎಂದು ಅಲ್ಲಿನ ಸ್ಥಳೀಯರ ಆರೋಪ.
Kshetra Samachara
16/06/2022 10:25 am