ಬೆಂಗಳೂರು: ಆರು ತಿಂಗಳೊಳಗೆ ನಗರದಲ್ಲಿರುವ ಕಸದ ಗುಂಡಿಗಳನ್ನು ತೆರವು ಮಾಡಿ, ಬ್ಲಾಕ್ ಸ್ಪಾಟ್ ಮುಕ್ತ ಶುಭ್ರ ನಗರವನ್ನಾಗಿ ಮಾಡಲಾಗುವುದು ಎಂದು ಪಾಲಿಕೆ ವಿಶೇಷ ಆಯುಕ್ತ ಹರೀಶ್ ಕುಮಾರ್ ಭರವಸೆ ನೀಡಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಲು ಎಲಿಮಿನೇಷನ್ ಬ್ಯೂಟಿಫಿಕೇಷನ್ ಹಾಗೂ ಮೈಂಟೆನೆನ್ಸ್‌ಗೆ ಟೆಂಡರ್ ನೀಡಲಾಗಿದೆ ಎಂದರು.
ಆರು ತಿಂಗಳೊಳಗೆ ಎಲ್ಲವನ್ನೂ ತೆರವುಗೊಳಿಸಿ ಸ್ವಚ್ಛ ಬೆಂಗಳೂರಾಗಿ ರೂಪಿಸಲಾಗುವುದು. ಎರಡು ಹಂತಗಳಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ತೆರವು ಮಾಡಬೇಕಾಗಿದೆ. 1479 ಬ್ಲಾಕ್‌ಸ್ಪಾಟ್‌ಗಳಿದ್ದು, ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ಬ್ಲಾಕ್ ಸ್ಪಾಟ್ ನಿಯಂತ್ರಣಕ್ಕೆ 3 ತಿಂಗಳು ಸಿಸಿ ಟಿವಿ ಹಾಕಿ ಗಮನಿಸಲಾಗುತ್ತದೆ. ಅದು ತೆರವಾದ ಮೇಲೆ ಮತ್ತೆ ಜನರು ಅಲ್ಲೇ ಕಸ ಹಾಕುತ್ತಾರೆ. ಆದರೆ, ಹಾಗಾಗದ ರೀತಿ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
13,632 ಗುಂಡಿಗಳನ್ನು ಪತ್ತೆ ಹಚ್ಚಿದ್ದು, 12,286 ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ ಎಂದರು.
ಬಿಬಿಎಂಪಿ 8 ವಲಯಗಳ ಆಸ್ತಿಗಳ ಸರ್ವೆ ಮಾಡಲು ಆಯುಕ್ತರು ತೀರ್ಮಾನಿಸಿದ್ದು, ಸರ್ವೆಯರ್‌ಗಳನ್ನು ನೇಮಿಸಲಾಗಿದೆ. ಒತ್ತುವರಿಯಾಗಿದ್ದರೆ ತೆರವು ಮಾಡಲಾಗುವುದು. ಬಿಡಿಎನಿಂದ ವರ್ಗಾವಣೆಯಾದ ಲೇಔಟ್ ಪಟ್ಟಿ ಮಾಡಿ ಪರಿಶೀಲನೆ ನಡೆಸಲಾಗುವುದು ಎಂದರು.
PublicNext
13/06/2022 04:49 pm