ಬೆಂಗಳೂರು: ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಾಣಮಾಡಿ ಮಧ್ಯವರ್ತಿಗಳು ಹಣವಸೂಲಿ ಮಾಡಲಾಗಿದ್ದು ಈ ಬಗ್ಗೆ ಪರಿಶೀಲಿಸಿ ತೆರವು ಮಾಡುವಂತೆ ಒತ್ತಾಯಿಸಿ ಊರಿನ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಲಿಮಂಗಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೊಪ್ಪ ಗೇಟ್‌ನಲ್ಲಿ ತಮಿಳುನಾಡು ಮೂಲದ ಶಿವಕುಮಾರ್ ಎಂಬಾತ ಸರ್ವೇ ನಂಬರ್ 109ರಲ್ಲಿ ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಾಣಮಾಡಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ.
ಇನ್ನು ಈ ಅಂಗಡಿಗಳನ್ನು ಸುಮಾರು 2 ವರ್ಷಗಳಿಂದ ಬಾಡಿಗೆ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಈ ಇನ್ನು ಬಗ್ಗೆ ತಹಶೀಲ್ದಾರ್ ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತಂದರು ಸಹ ಯಾವುದೇ ಪ್ರಯೋಜನ ಇಲ್ಲ ಅಂತ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿ ಬಲಾಢ್ಯರು ತಮ್ಮ ಕೈವಶ ಮಾಡಿಕೊಂಡಿರುವುದು ವಿಪರ್ಯಾಸ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಿ ಅಂತ ಸ್ಥಳೀಯ ಮುಖಂಡ ರಾಘವೇಂದ್ರ ಸರ್ಕಾರದ ಬಗ್ಗೆ ಕಿಡಿಕಾರಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಆನೇಕಲ್ ತಹಶೀಲ್ದಾರ ದಿನೇಶ್ ಮಾತನಾಡಿ ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ನಾನು ಪರಿಶೀಲನೆ ಮಾಡುತ್ತೇನೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು
ಒಟ್ನಲ್ಲಿ ಬಡವ ಏನಾದರೂ ಕೆರೆ-ಕುಂಟೆ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡರೆ ಅಧಿಕಾರಿಗಳು ತೆರುವುಗೊಳಿಸುತ್ತಾರೆ. ಆದ್ರೆ ಈ ರೀತಿ ಬಲಾಢ್ಯರು ಭೂಗಳ್ಳರು ಒತ್ತುವರಿ ಮಾಡಿಕೊಂಡರೆ ಅವರ ಕೈಗೊಂಬೆಗಳಾಗಿ ಕೆಲಸ ಮಾಡುವುದು ಮಾತ್ರ ವಿಪರ್ಯಾಸವೇ ಸರಿ ಇನ್ನದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಅನ್ನೋದು ನಮ್ಮ ಆಶಯ.
ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
08/06/2022 09:42 pm