ಬೆಂಗಳೂರು: ಹೆಂಗಂದ್ರೆ ಹಂಗೆ ಚಲಿಸುತ್ತಿರುವ ವಾಹನಗಳು, ಸಿಗ್ನಲ್ ಇದ್ರೂ ಆನ್ ಆಗದೆ ಇರುವ ಲೈಟ್ಸ್ ಗಳು. ಇದ್ರಿಂದ ಪ್ರತಿದಿನವೂ ಇಲ್ಲಿ ಆಕ್ಸಿಡೆಂಟ್ ಸಾಮಾನ್ಯ. ಈ ಜಾಗದಲ್ಲಿ ಈಗ ಯಮ ಧರ್ಮರಾಯ ಕಾದು ಕುಳಿತಂತಿದೆ. ವಾಹನ ಸವಾರರು ಬಿದ್ದು ಕೈ-ಕಾಲು, ಸೊಂಟ ಮುರಿದುಕೊಳ್ತಿದ್ದಾರೆ. ಹಾಗಾದ್ರೆ ಆ ಜಾಗ ಯಾವ್ದು ನೋಡೋಣ ಬನ್ನಿ.
ಹೌದು. ಪ್ರತಿಷ್ಠಿತ ವಿಜಯನಗರದ ಸುತ್ತಮುತ್ತ ಸಿಗ್ನಲ್ ಗಳು ವರ್ಕ್ ಆಗದೆ, ವಾಹನಿಗರು ಅಡ್ಡಾದಿಡ್ಡಿ ಸಾಗುತ್ತಾ ಆಕ್ಸಿಡೆಂಟ್ ಮಾಡ್ಕೊಳ್ತಿದ್ದಾರೆ. ರಾಜಾಜಿನಗರ, ಮೆಜೆಸ್ಟಿಕ್ ಕಡೆಯಿಂದ, ಸುಂಕದಕಟ್ಟೆ, ಪೀಣ್ಯಾ ಕಡೆಯಿಂದ ಬರುವ ವಾಹನಗಳು ಚಂದ್ರ ಲೇಔಟ್ ನಾಯಂಡಳ್ಳಿ ಕಡೆಯಿಂದ ಬರುವ ವಾಹನಗಳು ಬಂದು, ಈ ಸಿಗ್ನಲ್ ಗಳಿಗೆ ಸೇರಿಕೊಳ್ಳುತ್ತವೆ.
ಆದ್ರಿಂದ ಇಲ್ಲಿ ವಾಹನಗಳು ಹೆಚ್ವಾಗಿ ಪೀಕ್ ಅವರ್ಸ್ ನಲ್ಲಿ ಬರುವುದ್ರಿಂದ ಆಕ್ಸಿಡೆಂಟ್ ಆಗುತ್ತಿವೆ. ಮತ್ತೊಂದು ವಿಚಾರವೆಂದ್ರೆ ಇಲ್ಲಿ ವಿಜಯನಗರದಲ್ಲಿ ಫುಡ್ ಸ್ಟ್ರೀಟ್ ಇದೆ. ಮಾರ್ಕೆಟ್ ಇದೆ, ಜನದಟ್ಟಣೆಯ ಪಾರ್ಕಿಂಗ್ ಸಮಸ್ಯೆಗಳಿದೆ. ವಾಹನಗಳಿಗೆ ಯಾವುದೇ ಸೇಫ್ಟಿಯೂ ಇಲ್ಲ. ಇದ್ರಿಂದ ಸಿಗ್ನಲ್ ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತಾಗಿ ವಾಹನ ಸಂಚಾರ ಸುಗಮವಾಗಬೇಕು.
ವರದಿ: ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
01/06/2022 10:51 pm