ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿನ ರಸ್ತೆ ಗುಂಡಿ ಮುಚ್ಚದ ಪಾಲಿಕೆ ಅಧಿಕಾರಿಗಳಿಗೆ ಹೈಕೋರ್ಟ್ ತಾಖೀತು ಮಾಡುತ್ತಿದ್ದಂತೆ ಎಚ್ಚೇತ್ತು ಕೊಂಡಿರುವ ಬಿಬಿಎಂಪಿ ಮುಂದಿನ ಸೋಮವಾರದ ಒಳಗೆ ರಸ್ತೆ ಗುಂಡಿ ಮುಕ್ತ ಬೆಂಗಳೂರು ಮಾಡುವುದಾಗಿ ತಿಳಿಸಿದ್ದಾರೆ.
ಇಂದು ಪಾಲಿಕೆ ಕೇಂದ್ರ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಅವರು, ಬರುವ 6 ತಾರೀಖ್ ಒಳಗೆ ರಸ್ತೆ ಗುಂಡಿ ಮುಕ್ತ ಮಾಡಲಾಗುವುದು. ನಗರದಲ್ಲಿ ಗುಂಡಿಗಳ ಸರಾಸರಿ ಅಳತೆ ಎರಡು ಅಡಿ ವಿಸ್ತೀರ್ಣ ಇದೆ ಎಂದರು.
ಮುಂಗಾರು ಆರಂಭ ಹಿನ್ನೆಲೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿ ಕೊಳ್ಳಲಾಗಿದ್ದು, ಪರಿಹಾರ ಕೂಡಾ ವಿತರಣೆ ಆಗುತ್ತಿದೆ ಎಂದು ತಿಳಿಸಿದರು.
Kshetra Samachara
01/06/2022 02:50 pm