ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪದೇ ಪದೇ ಕೆಟ್ಟು ನಿಲ್ತಿದೆ ಮೆಮೊ ಪ್ಯಾಸೆಂಜರ್ ರೈಲು!

ಬೆಂಗಳೂರು: ಬಸ್ ನಲ್ಲಿ ಟ್ರಾಫಿಕ್ ಜಾಮ್,ಮತ್ತೊಂದು ರೈಲಿನಲ್ಲಿ ಹೋದ್ರೆ ಸ್ವಲ್ಪ ಮಟ್ಟಿಗೆ ಪ್ರಯಾಣದ ಚಾರ್ಜ್ ಕಮ್ಮಿ ಆಗುತ್ತೆ ಅಂತ ಕೆಲಸಕ್ಕೆ ಹೋಗುವವರೆಲ್ಲ ಈ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಆದ್ರೆ ಇಲ್ಲೊಂದು ರೈಲು ಪದೇ ಪದೇ ಕೆಟ್ಟು ನಿಂತು ಪ್ರಯಾಣಿಕರಿಗೆ ಎಲ್ಲಿ ನಿಂತೋಗುತ್ತೊ, ಕೆಲಸಕ್ಕೆ ಲೇಟಾಗುತ್ತೆ ಅಂತ ಭಯದಲ್ಲೆ ಪ್ರಯಾಣ ಮಾಡುವ ಹಾಗೆ ಮಾಡ್ತಿದೆ.

ಮೈಸೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟ ರೈಲೊಂದು ಮಧ್ಯದಲ್ಲೆ ನಿಂತ ಘಟನೆ ಕೆಂಗೇರಿಯಲ್ಲಿ ನಡೆದಿದೆ. ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ರೈಲ್ವೆ ಹಳಿ ದಾಟಿ ಬಸ್ ಹತ್ತಲು ಮುಂದಾಗುತ್ತಿದ್ದಾರೆ. ಇಂಜಿನ್ ಕೆಟ್ಟ ಹಿನ್ನೆಲೆ ರೈಲು ನಿಂತಿದ್ಯಂತೆ. ಮೈಸೂರಿನಿಂದ ಆರು ಗಂಟೆಗೆ ಹೊರಟಿದ್ದ ರೈಲು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ತಲುಪಬೇಕಿತ್ತು. ಆದ್ರೆ ಕೆಂಗೇರಿಯಲ್ಲಿ ಮೆಮೊ ಪ್ಯಾಸೆಂಜರ್ ರೈಲು ಇಂಜಿನ್ ಕೆಟ್ಟಿದ ಕಾರಣ ನಿಂತಲ್ಲೆ ನಿಂತಿದೆ. ಇದ್ರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಈ ರೈಲು ಯಾವಾಗ್ಲು ಹೀಗೆ ಆಗುತ್ತೆ. ನಾಯಂಡಳ್ಳಿ ಅಥವಾ ಜ್ಞಾನಭಾರತಿ ಹತ್ತಿರ ನಿಲ್ಲುತ್ತಿತ್ತು. ಆದ್ರೆ ಈಗ ಕೆಂಗೇರಿಯಲ್ಲೆ ನಿಂತು ಹೋಗಿದೆ. ನಾವು ಹೇಗೆ ಕೆಲಸಕ್ಕೆ ಹೋಗುವುದು. ನಮಗೆ ಬದಲಿ ವ್ಯವಸ್ಥೆ ಮಾಡಿಸಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಇಷ್ಟೆಲ್ಲ ಆದ್ರು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ವಿಸಿಟ್ ಮಾಡಿಲ್ಲ. ಯಾವಾಗ್ಲು ಹಾಳಾಗುವ ಈ ರೈಲನ್ನ ಸರಿಪಡಿಸದೆ ಚಾಲನೆಗೆ ಬಿಟ್ಟಿದ್ದಾರೆ.ಇದ್ರಿಂದ ಜನರು ಸಂಕಷ್ಟಕ್ಕೆ ಸಿಲುಕಿ, ರೈಲ್ವೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ನಲ್ಲಿ ಇದು ಬೇಕು ಅಂತ ಹಿಂಗೆ ನಿಲ್ಲಿಸುತ್ತಿದ್ದಾರೋ ಅಥವಾ ನಿಜವಾಗ್ಲು ಕೆಡ್ತಿದ್ರು ಯಾಕೆ ಅಧಿಕಾರಿಗಳು ಎಚ್ಚೆತ್ಕೊಂಡಿಲ್ಲ ಅನ್ನೋದು ಪ್ರಶ್ನೆಯಾದ್ರೆ. ಬೇಗ ಈ ರೈಲಿಗೊಂದು ಕ್ರಮ ಕೈಗೊಂಡು ಕೂಡಲೆ ರೈಲಿನ ಪ್ರಯಾಣಿಕರಿಗೆ ಸಂಚಾರಕ್ಕೆ ಎಡೆಮಾಡಬೇಕು ಅನ್ನೋದು ಪ್ರಯಾಣಿಕರ ಆಗ್ರಹವಾಗಿದೆ.

-ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Manjunath H D
PublicNext

PublicNext

30/05/2022 11:48 am

Cinque Terre

28.44 K

Cinque Terre

0

ಸಂಬಂಧಿತ ಸುದ್ದಿ