ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಬೈಲ್ ನೆಟ್‌ ವರ್ಕ್ ಕಂಪನಿಗಳಿಂದ ರಸ್ತೆ ಹಾಳು; ಬಿಟಿಎಂ ಲೇಔಟ್ ನಿವಾಸಿಗಳ ಗೋಳು

ಬೆಂಗಳೂರು: ಖಾಸಗಿ ಮೊಬೈಲ್ ಟವರ್ ಕಂಪನಿಗಳು ಬೆಂಗಳೂರಿನ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಹಾಳು ಮಾಡಿದ್ದಾರೆ. ಒಮ್ಮೆ ಈ ರಸ್ತೆಯನ್ನು ನೋಡಿ... ಒಂದೇ ಸರ್ಕಲ್‌ ನಲ್ಲಿ ರಸ್ತೆಯ ದಿಕ್ಕು- ದಿಕ್ಕುಗಳಲ್ಲಿ ಅಗೆದು ಕೇಬಲ್ ಅಳವಡಿಸಿದ್ದಾರೆ. ಇದು ಬಿಟಿಎಂ ಲೇಔಟ್ ನ 16ನೇ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಸರ್ಕಲ್ ದುಸ್ಥಿತಿ.

25 ಅಡಿ ಇರುವ ರಸ್ತೆಯ ಎರಡು ಬದಿಯಲ್ಲೂ ಕಂಪನಿಗಳು ಅಗೆದು ಕೇಬಲ್ ಚೇಂಬರ್ ನಿರ್ಮಿಸಿದ್ದಾರೆ. ಇದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆ ಬದಿ ಹೋಗಲು ಸಾಧ್ಯವಾಗುತ್ತಿಲ್ಲ. ಎಲ್ಲ ವಾಹನಗಳೂ ರಸ್ತೆ ಮಧ್ಯದಲ್ಲೇ ಸಾಗಬೇಕಾಗಿದೆ. ಅದರಲ್ಲೂ ಈ ಚೇಂಬರ್ ಮೇಲೆ ಹಾಕಿರುವ ಸ್ಲಾಬ್ ನ್ನು ಬೇಕಾಬಿಟ್ಟಿಯಾಗಿ ಮುಚ್ಚಲಾಗಿದೆ.

ಬಿಟಿಎಂ ಲೇಔಟ್ ನ ಎಲ್ಲ ರಸ್ತೆಗಳಲ್ಲಿ ಈ ಮೊಬೈಲ್ ನೆಟ್‌ ವರ್ಕ್ ಕಂಪನಿಗಳು ಮಾಡಿರುವ ಕೆಲಸದಿಂದಾಗಿ ನಿವಾಸಿಗಳು ಪರದಾಡಬೇಕಾಗಿದೆ. ಕೇಬಲ್‌ ಗಳನ್ನು ಅಂಡರ್ ಗ್ರೌಂಡ್ ನಲ್ಲಿ ಹಾಕಿದ ನಂತರವೂ ಸ್ಥಳೀಯರಿಗೆ ರಸ್ತೆ ಮೇಲೆ ರಾರಾಜಿಸುತ್ತಿರುವ ಕೇಬಲ್ ಗಳಿಂದ ಮಾತ್ರ ಮುಕ್ತಿ ಸಿಕ್ಕಿಲ್ಲ. ಅದರಲ್ಲೂ ಕೇಬಲ್‌ ಗಳು ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಕುತ್ತು ತರುವಂತಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಎಚ್ಚೆತ್ತು ಈ ಕಂಪನಿಗಳ ನಿರ್ಲಕ್ಷ್ಯಕ್ಕೆ ಬ್ರೇಕ್ ಹಾಕಬೇಕಿದೆ.

Edited By :
PublicNext

PublicNext

26/05/2022 11:18 am

Cinque Terre

34.15 K

Cinque Terre

0

ಸಂಬಂಧಿತ ಸುದ್ದಿ