ಬೆಂಗಳೂರು: ನಮಗೆ ಫುಟ್ ಪಾತ್ ಇಲ್ಲ ಸ್ವಾಮಿ.. ನಾವು ಓಡಾಡೋದು ಹೇಗೆ.. ನಮಗೆ ಈ ರಸ್ತೆಯೇ ದೊಡ್ಡ ಸಮಸ್ಯೆಯಾಗ್ಬಿಟ್ಟಿದೆ. ಫುಟ್ಪಾತ್ ಇಲ್ದೇ ದೊಡ್ಡ ತಲೆ ನೋವು ಆಗಿದೆ.. BWSSB ಅರ್ಧಬಂರ್ಧ ಕಾಮಗಾರಿ ಮಾಡಿ ಅಲ್ಲಲ್ಲಿ ಗುಂಡಿ ತೋಡಿರೋದ್ರಿಂದ ಈ ರಸ್ತೆಯಲ್ಲಿ ಡ್ರೈವಿಂಗ್ ಸಹ ಮಾಡೋಕೆ ಆಗ್ತಿಲ್ಲ...ಏನಿಲ್ಲಾ ಅಂದ್ರೂ ಐದಾರು ಕಿಲೋಮೀಟರ್ ಹೀಗೆ ಗುಂಡಿಗಳಿವೆ. ಸುಮಾರು ಎರಡು ತಿಂಗಳಾದರೂ ಸಹ ಕಾಮಗಾರಿ ಕಂಪ್ಲೀಟ್ ಆಗಿಲ್ಲ..ಇದು ಇಲ್ಲಿನ ಸ್ಥಳೀಯರ ದೂರುಗಳು…
ಒಂದು ಕಡೆ ಆಳವಾದ ಗುಂಡಿಗಳು, ಮತ್ತೊಂದು ಕಡೆ ಕಾಲಿಗೆ ಮೆತ್ತಿಕೊಳ್ಳುವ ಕೆಸರು, ಅಲ್ಲಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಕಬ್ಬಿಣದ ಪೈಪ್ ಗಳು… ಜಯನಗರ 7 ಬ್ಲಾಕ್, ಜೆ,ಎಸ್,ಎಸ್ ಸರ್ಕಲ್, WKP ರೋಡ್ ನಲ್ಲಿ ಸುಮಾರು 5-6 ಕಿಮೀ ವರೆಗೆ ಇದೇ ಪರಿಸ್ಥಿತಿ ಇದೆ. ಸುಮಾರು 2 ತಿಂಗಳಾದ್ರು ಕಾಮಗಾರಿ ಕಂಪ್ಲೀಟ್ ಆಗದೆ ಮಂದಗತಿಯಲ್ಲಿ ಸಾಗ್ತಿದೆ.. ಇದ್ರಿಂದ ಸಾರ್ವಜನಿಕರಿಗೆ, ಇಲ್ಲಿನ ವ್ಯಾಪಾರಿಗಳಿಗೆ ತುಂಬಾನೆ ತೊಂದರೆಯಾಗ್ತಿದೆ.
ಇಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಆದ್ರೆ ಯಾರಿಂದಲೂ ಇಲ್ಲಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.. ಜಯನಗರ ಬಹು ವ್ಯಾಪಾರ ವಹಿವಾಟು ನಡೆಯುವ ಸ್ಥಳ.. ಅಂತಾದ್ರಲ್ಲಿ ರಸ್ತೆ ಹೀಗಿದ್ರೆ ಯಾವ ಜನರು ವ್ಯಾಪಾರಕ್ಕೆ ಬರ್ತಾರೆ.. ಇಲ್ಲಿನ ಶಾಸಕಿ ಸೌಮ್ಯಾರೆಡ್ಡಿ ಆದಷ್ಟು ಬೇಗ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಬೇಕು ಅಂತ ಇಲ್ಲಿನ ಸ್ಥಳೀಯರು ಒತ್ತಾಯಿಸಿದ್ದಾರೆ. ಹಾಗೇ ಕಾಮಗಾರಿ ಅಂತ ಗುಂಡಿ ತೋಡಿ ಕೊನೆಗೆ ಕಾಟಾಚಾರಕ್ಕೆ ಗುಂಡಿ ಮುಚ್ಚು ಕೆಲಸ ಮಾಡುವ ಅಧಿಕಾರಿಗಳು ಕೂಡಾ ಜನರ ಜೀವದ ಜೊತೆ ಚೆಲ್ಲಾಟವಾಡೋದನ್ನ ಬಿಟ್ಟು ಸಮಸ್ಯೆಗೆ ಪರಿಹಾರ ನೀಡಬೇಕಾಗಿದೆ.
ರಂಜಿತಾಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
24/05/2022 06:48 pm