ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಜಪೇಯಿ ಕ್ರೀಡಾಂಗಣ ಮೇಲ್ಚಾವಣಿ ಕುಸಿತ ಕೇಸ್ : ಗುತ್ತಿಗೆದಾರ ನೇರ ಹೊಣೆ

ಬೆಂಗಳೂರು : ಉದ್ಘಾಟನೆಯಾದ 2 ತಿಂಗಳಲ್ಲಿಯೇ 'ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ'ದ ಗ್ಯಾಲರಿ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿನ ಹೆಎಚ್ ಎಸ್ ಆರ್ ಲೇಔಟ್ ನಲ್ಲಿ ನಿನ್ನೆ ನಡೆದಿದೆ.

ಈ ಘಟನೆ ರಾಜ್ಯ ಸರ್ಕಾರಕ್ಕೆ ಇರಿಸು - ಮುರಿಸಾಗಿದ್ದು, ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ನೇರ ಹೊಣೆ ಯಾಗುತ್ತದೆ. ಅವರು ಸ್ವಂತ ಖರ್ಚಿ ನಲ್ಲಿ ಕ್ರೀಡಾಂಗಣದ ಮೇಲ್ಚಾವಣಿ ನಿರ್ಮಾಣ ಮಾಡಬೇಕು. ಈ ಸಂಬಂಧ ಅವರಿಗೆ ನೋಟಿಸ್ ನೀಡಲಾಗುತ್ತೆ ಎಂದು ತಿಳಿಸಿದರು.

ಇಂದು ಆಮ್ ಅದ್ಮಿ ಪಾರ್ಟಿ ಮುಖಂಡರು ಕೂಡಾ ಸ್ಥಳ ಪರಿಶೀಲನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ

Edited By : Shivu K
PublicNext

PublicNext

09/05/2022 08:26 pm

Cinque Terre

32.15 K

Cinque Terre

3

ಸಂಬಂಧಿತ ಸುದ್ದಿ