ಬೆಂಗಳೂರು: ಇದು ಕೆಂಗೇರಿಯ ಮೋರಿ ಖ್ಯಾತಿಯ ವೃಷಭಾವತಿ ನದಿ. ಕಾರ್ಖಾನೆ, ಆಸ್ಪತ್ರೆಗಳ ತ್ಯಾಜ್ಯ, ಮಲಮೂತ್ರ, ಚರಂಡಿ ನೀರು ಎಲ್ಲವೂ ಸೇರಿ ವೃಷಭಾವತಿಯನ್ನು ಹಾಳು ಮಾಡಿಬಿಟ್ಟಿವೆ.
ಚರಂಡಿ ನೀರನ್ನು ಫಿಲ್ಟರ್ ಮಾಡಿ ಮೋರಿಗೆ ನೀರು ಬಿಡಬೇಕು ಎಂದು ಸರ್ಕಾರ ರೂಲ್ಸ್ ಮಾಡಿದೆ. ಆದರೆ ಫಿಲ್ಟರ್ ಆಗಿ ಬರುತ್ತಿರೋದು 5 ಟ್ಯಾಂಕ್ ಅಷ್ಟೇ.. ಉಳಿದ 30 ಟ್ಯಾಂಕ್ ಗಳ ನೀರು ಹಾಗೆ ಮೋರಿ ಸೇರುತ್ತಿದೆ. ಪರಿಣಾಮ ವೃಷಭಾವತಿ ನದಿಗೆ ಮೋರಿಯ ಕಳಂಕ ಸುತ್ತಿಕೊಂಡು ಕೆಂಗೇರಿ ಮೋರಿಯಾಗಿದೆ. ಇನ್ನು ಈ ಮೋರಿಯ ನೀರು ಎಲ್ಲಿ ಹೋಗುತ್ತೆ? ಇದರಿಂದ ಏನೆಲ್ಲ ಸಮಸ್ಯೆ ಆಗುತ್ತಿದೆ ನೋಡೋಣ ಬನ್ನಿ. ಇದರ ಬಗ್ಗೆ ನಮ್ಮ ರಿಪೋರ್ಟರ್ ರಂಜಿತಾ ಸುನಿಲ್ ನಡೆಸಿರುವ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..
ಇದಷ್ಟೇ ಅಲ್ಲ ಮುಂದಿನ ಸ್ಟೋರಿಯಲ್ಲಿ ಈ ಕೆಂಗೇರಿಯ ವೃಷಭಾವತಿ ನದಿ ಎಲ್ಲೆಲ್ಲಿ ಹರಿದು ಹೋಗುತ್ತೆ. ಏನೆಲ್ಲ ಸಮಸ್ಯೆಗಳು ಆಗುತ್ತಿವೆ ಎಂಬ ಬಗ್ಗೆ ಪಬ್ಲಿಕ್ ನೆಕ್ಸ್ಟ್‌ನ ಗ್ರೌಂಡ್ ರಿಪೋರ್ಟ್ ನಲ್ಲಿ ತೋರಿಸ್ತೀವಿ.
ರಂಜಿತಾ ಸುನಿಲ್, ಮೆಟ್ರೋ ಬ್ಯೂರೊ ಪಬ್ಲಿಕ್ ನೆಕ್ಸ್ಟ್ ಕೆಂಗೇರಿ
PublicNext
01/05/2022 07:45 pm