ಕೆಂಗೇರಿ: ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡಿಯುತ್ತಾನೆ ಇರುತ್ತೆ.. ಇಲ್ಲೊಂದು ಕಡೆ ತಿಂಗಳು ಗಟ್ಟಲೆಯಾದ್ರು, ಕಾಮಗಾರಿ ಮುಗ್ದಿಲ್ಲ, ವ್ಯಾಪಾರಸ್ಥರ ಗೋಳು ತಪ್ಪುತ್ತಿಲ್ಲ. ಬಸ್ ಮಾರ್ಗವು ಸಹ ಸ್ಥಗಿತಗೊಂಡಿದೆ. ಇದ್ರಿಂದ ಬಸ್ ಸಂಚಾರಿಗಳು ಪರದಾಡುವಂತಾಗಿದೆ. ಹಾಗಾದ್ರೆ ಇದು ಯಾವ ರಸ್ತೆ, ಎಲ್ಲಿದೆ ಅಂತ ನೋಡೋಣ ಬನ್ನಿ..
ಹೌದು ನೀವು ನೋಡ್ತಿರುವ ಈ ರಸ್ತೆ ಇರೋದು ಕೆಂಗೇರಿ ಉಪನಗರ. ಕೆಂಗೇರಿಯಿಂದ ಪ್ರಾರಂಭವಾದ್ರೆ, ಹೊಯ್ಸಳ ಸರ್ಕಲ್ ವರೆಗೂ ಇದೇ ಸ್ಥಿತಿ. ಒಂದು ಕಡೆ ಬಸ್ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.. ಆದ್ರೆ ಮತ್ತೊಂದು ಕಡೆ ವೈಟ್ ಟಾಂಪಿಗ್ ಕಾಮಗಾರಿ ಪ್ರಾರಂಭಮಾಡಿ 3-4 ತಿಂಗಳು ಕಳೆದ್ರೂ, ಕೆಲಸ ಕಂಪ್ಲೀಟ್ ಆಗಿಲ್ಲ. ಬಸ್ ಸಂಚಾರವನ್ನ ಸಂಪೂರ್ಣವಾಗಿ ಸ್ಥಗಿತ ಮಾಡಿದ್ದಾರೆ.. ಕೆಂಗೇರಿಯ ರೈಲ್ಬೆ ಸ್ಟೇಷನ್ ಮುಂದೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ಈ ರಸ್ತೆಯಲ್ಲಂತೂ ಎಲ್ಲೆಲ್ಲೂ ಗುಂಡಿಗಳೇ ರಾರಾಜಿಸುತ್ತಿವೆ. ಮಳೆ ಬಂದ್ರೆ ಸಂಪೂರ್ಣ ನೀರಿನಿಂದ ಮುಳುಗಿರುತ್ತೆ. ಆ ಟೈಂನಲ್ಲಿ ಬಸ್ ಗಳು ಸ್ಟಾಪ್ ಕೂಡ ಕೊಡಲ್ಲ, ಹೀಗಾಗಿ ಬಸ್ ಗೆ ಹೋಗುವವರು ಸಮಸ್ಯೆ ಎದುರಿಸ್ತಾ ಇದ್ದಾರೆ.. ಇನ್ನೂ ವ್ಯಾಪಾರಸ್ಥರು ಸಹ ವ್ಯಾಪಾರವಿಲ್ಲದೆ ಗೋಳಾಡ್ತಿದ್ದಾರೆ., ಪಾರ್ಕಿಂಗ್ ಸಮಸ್ಯೆಯಿಂದ ಯಾರು ಅಂಗಡಿಗಳತ್ತ ಬರ್ತಿಲ್ಲ.
ಒಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆ ಬಗ್ಗೆ ಅಧಿಕಾರಿಗಳು ಗಮನಿಸಿದ್ದಾರೋ ಇಲ್ವೋ ಗೊತ್ತಿಲ್ಲ. ಇನ್ನಾದ್ರು, ಬಸ್ ಸಂಚಾರದ ಮುಖ್ಯರಸ್ತೆಯಾಗಿರುವ ಈ ರಸ್ತೆಯ ಕೆಲಸವನ್ನ ಬೇಗ ಮಾಡಿ ಮುಗಿಸ್ಬೇಕಿದೆ. ಇಲ್ದಿದ್ರೆ ಸ್ಥಳೀಯ ವ್ಯಾಪಾರಸ್ಥರ ಆಕ್ರೋಶಕ್ಕೆ ಗುರಿಯಾಗೋದ್ರಲ್ಲಿ ಎರಡು ಮಾತಿಲ್ಲ..
Kshetra Samachara
26/04/2022 04:03 pm