ಬೆಂಗಳೂರು: ಬಿಬಿಎಂಪಿ 2022ರ ಏಪ್ರಿಲ್ 1 ರ ನಂತರ 53 .67 ಕೋಟಿ ರೂ ಗಳಷ್ಟು ಡಿ.ಸಿ.ಬಿಲ್ ಗಳನ್ನು ಪಾವತಿ ಮಾಡಿದೆ. ಆದರೆ, ಅದರಲ್ಲಿ ಬಹುತೇಕ ಬಿಲ್ ಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳನ್ನು ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ (ಐಎಫ್.ಎಂ.ಎಸ್) ಅಪ್ ಲೋಡ್ ಮಾಡಿಲ್ಲ.
ಯಾರಿಗೆ ಬಿಲ್ ಪಾವತಿಸಲಾಗಿದೆ, ಬಿಲ್ ಪ್ರತಿ, ಅದಕ್ಕೆ ಎಷ್ಟು ಸರಕು ಹಾಗೂ ಸೇವಾ ತೆರಿಗೆ ಪಾವತಿಸಲಾಗಿದೆ. ಮುಂತಾದ ಯಾವುದೇ ವಿವರಗಳೂ ಐ ಎಫ್ ಎಮ್ ಎಸ್ ನಲ್ಲಿ ಲಭ್ಯವಿಲ್ಲ. ಇದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೇರೆ ಬೇರೆ ಪಿ- ಕೋಡ್ ಗಳಿಗೆ ಸಂಬಂಧಿಸಿದ ಡಿ.ಸಿ.ಬಿಲ್ ಗಳ ಪಾವತಿಗೆ ವಲಯ ಮಟ್ಟದ ಅಧಿಕಾರಿಗಳ ಹಂತದಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.
ಭೂಮಿ ಖರೀದಿ, ಅಂಬೇಡ್ಕರ್ ಭವನ ನಿರ್ಮಾಣ, ಮನೆ,ಹಾಸ್ಟೆಲ್ ನಿರ್ಮಾಣ ಕಾರಣಕ್ಕೆ ಬಿಲ್ ಪಾವತಿ ಮಾಡಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
PublicNext
20/04/2022 09:28 pm