ಬೆಂಗಳೂರು: ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಮ್ಯಾನ್‌ಹೋಲ್ ಸಾವಿಗಾಗಿ ಕಾಯುತ್ತಿದೆ. ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಇದು ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಾಗಿದೆ. ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು ರಸ್ತೆಯ ಎಡ ಸಾಲಿನಲ್ಲಿ ಸಂಚರಿಸುತ್ತವೆ. ಆದರೆ ಮ್ಯಾನ್‌ಹೋಲ್ ತೆರೆದಿದ್ದು ದ್ವಿಚಕ್ರ ವಾಹನ ಸವಾರರ ಜೀವ ಅಪಾಯದಲ್ಲಿದೆ.
ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರರಿಗೆ ಮ್ಯಾನ್‌ಹೋಲ್ ಕಾಣಿಸುತ್ತಿಲ್ಲ. ಯಾರಾದರೂ ಮ್ಯಾನ್‌ಹೋಲ್‌ಗೆ ಬಿದ್ದರೆ ಪ್ರಾಣ ಕಳೆದುಕೊಳ್ಳುವುದು ಖಚಿತ. ಮಳೆ ಬಂದರೆ ರಸ್ತೆಯಲ್ಲಿ ನೀರು ತುಂಬಿ ಜನರು ಮ್ಯಾನ್ ಹೋಲ್‌ಗೆ ಬೀಳಬಹುದು. ಕೂಡಲೇ ಅಧಿಕಾರಿಗಳು ಮ್ಯಾನ್‌ಹೋಲ್ ಮುಚ್ಚಿ ಅಮಾಯಕರ ಜೀವ ಉಳಿಸಬೇಕು ಎನ್ನುವುದು ಪಬ್ಲಿಕ್ ಆಗ್ರಹ.
ನವೀನ ಪಬ್ಲಿಕ್ ನೆಕ್ಸ್ಟ್
ಬೆಂಗಳೂರು
PublicNext
18/04/2022 10:39 pm