ವಿಶೇಷ ವರದಿ-ಗಣೇಶ್ ಹೆಗಡೆ
ಬೆಂಗಳೂರು: ಬಿಎಂಟಿಸಿ ನಿಗಮ ಆರ್ಥಿಕವಾಗಿ ಸಾಕಷ್ಟು ಕುಸಿದಿದೆ. ಹೀಗೆ ಮುಂದುವರಿದ್ರೆ ದಿವಾಳಿ ಹಂತಕ್ಕೆ ತಲುಪಬಹುದು. ಈ ಸಂಬಂಧ ನಿಗಮ ಈ ವರ್ಷ ಬರೋಬ್ಬರಿ 183 ಕೋಟಿ ರೂ ಸಾಲ ಮಾಡಿದೆ.
ಫೆಬ್ರವರಿ-ಮಾರ್ಚ್ ಮಾಹೆಯಲ್ಲಿ ಬಿಎಂಟಿಸಿ ನಿಗಮ 183 ಕೋಟಿ ರೂ ಸಾಲವನ್ನು ಪಡೆದಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಇನ್ನೂ ನಿಗಮ ಅಧ್ಯಕ್ಷ ನಂದೀಶ್ ರೆಡ್ಡಿರವರು ಅಭಿವೃದ್ಧಿಗೆ ಎಂದು ವಿಷಯ ತಿರುಚುವ ಪ್ರಯತ್ನ ಮಾಡ್ತಾರೆ. ತಮ್ಮ ಟಿಟಿಎಂಸಿಗಳನ್ನು ಅಡಮಾನಕ್ಕಿಟ್ಟು ಸಾಲ ತರಲಾಗಿದೆ ಎಂಬ ಮಾತು ಕೇಳಿ ಬರ್ತಿದೆ.
PublicNext
14/04/2022 07:48 pm