ಬೆಂಗಳೂರು: ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಾಡಲು ಮುಂದಾಗಿದ್ದ ಮಿನರ್ವ ಸರ್ಕಲ್ ನಿಂದ ಹಡ್ಸನ್ ವೃತ್ತದ ವರೆಗಿನ ಸ್ಟೀಲ್ ಬ್ರಿಡ್ಜ್ ಯೋಜನೆ ಮುನ್ನಲೆಗೆ ಬಂದಿದೆ.
ಮಿನರ್ವ ವೃತ್ತ, ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್ , ಎಲ್ ಐ ಸಿ ಕಚೇರಿ, ಟೌನ್ ಹಾಲ್ , ಹಲಸೂರ್ ಗೇಟ್ ಪೊಲೀಸ್ ಠಾಣೆ, ಹಡ್ಸನ್ ವೃತ್ತದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ 2018 ರಲ್ಲಿ ಅಂದಿನ ಸರ್ಕಾರ ಸ್ಟೀಲ್ ಬ್ರಿಡ್ಜ್ ಯೋಜನೆ ಜಾರಿಗೆ ಮುಂದಾಗಿತ್ತು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು.
ಇದೀಗ 1.7 ಕಿ.ಮೀ ಮೇಲು ಸೇತುವೆ ನೀಲನಕ್ಷೆ ಸಿದ್ದವಾಗಿದ್ದು, 200-250 ಕೋಟಿ ರೂ. ಹಣ ಮೀಸಲಿಡುವ ಸಾಧ್ಯತೆ ಇದೆ.ಈ ಬಗ್ಗೆ ಬಿಬಿಎಂಪಿ ಬಜೆಟ್ ನಲ್ಲಿ ಹಣ ಮೀಸಲಿಡುವ ಸಂಭವ ಇದೆ.
ಈ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಮನವಿಗಳು ಬಂದಿದ್ದು ಸರ್ಕಾರಕ್ಕೆ ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
PublicNext
29/03/2022 07:20 pm