ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧ ವಲಯಗಳಲ್ಲಿ 2010-11ರಿಂದ 2017-18ರ ವರೆಗಿನ ಅಂದಾಜು 8 ಸಾವಿರ ಕೋಟಿ ಮೊತ್ತದ ಅಭಿವೃದ್ದಿ ಕಾಮಗಾರಿಗಳಿಗೆಂದು ಜಾಬ್ ಕೋಡ್ ಪಡೆದು ಕಾರ್ಯಾದೇಶ ಪಡೆಯದ ಕಾಮಗಾರಿಗಳನ್ನು ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ರದ್ದು ಮಾಡಲು ಮುಂದಾಗಿದ್ದಾರೆ!
ಇದು ಪಾಲಿಕೆ ವ್ಯಾಪ್ತಿಯಲ್ಲಿ ಆಗಿದ್ದ ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಕೈಬಿಸಿ ಮಾಡಿ ತಮ್ಮ ಬಳಿ ಇಟ್ಟುಕೊಂಡಿದ್ದ ಕಾಮಗಾರಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅಲ್ಲದೆ, ಈ ವಿಷಯ ಗುತ್ತಿಗೆದಾರರನ್ನು ದಂಗುಬಡಿಸುವಂತೆ ಮಾಡಿದೆ.
ಹಣಕಾಸು ಇಲಾಖೆಯ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಮಾ. 4ರಂದು ಪಾಲಿಕೆಯ ಎಲ್ಲಾ ವಲಯಗಳ ಮುಖ್ಯ ಎಂಜಿನಿಯರ್ ಹಾಗೂ ಕಾರ್ಯಪಾಲಕ ಎಂಜಿನಿಯರ್ ಗಳಿಗೆ ಕಳುಹಿಸಿರುವ ಆಂತರಿಕ ಟಿಪ್ಪಣಿಯಲ್ಲಿ ವರ್ಕ್ ಆರ್ಡರ್ ಪಡೆದುಕೊಳ್ಳದ ಜಾಬ್ ಕೋಡ್ ರದ್ದು ಪಡಿಸುವಂತೆ ಕೋರಲಾಗಿದೆ. ಇದಕ್ಕೆ ತೀವ್ರ ಆಕ್ಷೇಪ ಕೇಳಿಬಂದಿದೆ.
PublicNext
24/03/2022 10:57 pm