ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊಳಗೇರಿಯಲ್ಲಿ 1000 ಮನೆ ನಿರ್ಮಾಣ; ಸಚಿವ ವಿ. ಸೋಮಣ್ಣ, ಶಾಸಕ ಲಿಂಬಾವಳಿ ಚಾಲನೆ

ಮಹಾದೇವಪುರ: ಮಹಾದೇವಪುರ ಕ್ಷೇತ್ರ ವ್ಯಾಪ್ತಿಯ ವಿವಿಧ ಕೊಳಗೇರಿ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಪ್ರಧಾನಮಂತ್ರಿ ಆವಾಸ್‌ ನ ಸರ್ವರಿಗೂ ಸೂರು ಯೋಜನೆಯಡಿ ಕೊಳಗೇರಿ ಪ್ರದೇಶಗಳಲ್ಲಿ ಸಾವಿರ ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ವಸತಿ ಸಚಿವ ವಿ. ಸೋಮಣ್ಣ ಹಾಗೂ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವ ಸೋಮಣ್ಣ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಾಗೂ ಉತ್ತರಪ್ರದೇಶ ಸಿಎಂ‌ ಯೋಗಿ ಆದಿತ್ಯನಾಥ್ ಅವರ ಅಭಿವೃದ್ಧಿ ಕಾರ್ಯಗಳಿಂದ ಪಂಚರಾಜ್ಯಗಳ ಚುನಾವಣೆಯ 4 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಫಲಿತಾಂಶ ಕರ್ನಾಟಕ ಚುನಾವಣೆಯ ದಿಕ್ಸೂಚಿ ಎಂದರು‌.

ಐಟಿ ಬಿಟಿ ಕ್ಷೇತ್ರವೆಂದೇ ಕರೆಯಲ್ಪಡುವ ಮಹಾದೇವಪುರ ಕ್ಷೇತ್ರವನ್ನು ಕಳೆದ 15 ವರ್ಷಗಳಲ್ಲಿ ಅರವಿಂದ ಲಿಂಬಾವಳಿ ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ ಎಂದು ಪ್ರಶಂಸಿಸಿದರು. ಇದೇ ವೇಳೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಕೊಡತಿಯಲ್ಲಿ ನಿರ್ಮಿಸಿರುವ "ನನ್ನ ಮನೆ" ಯೋಜನೆ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

23/03/2022 01:45 pm

Cinque Terre

21.5 K

Cinque Terre

0

ಸಂಬಂಧಿತ ಸುದ್ದಿ