ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಲ್ಲಿ ಸಿಬ್ಬಂದಿ ಯಾರು, ಜನ ಯಾರೆಂಬುದೇ ತಿಳಿಯುತ್ತಿಲ್ಲ..ಕಿರಿದಾದ ಕಚೇರಿಯಲ್ಲಿ ಸದಾ ಜನದಟ್ಟಣೆ

ದೊಡ್ಡಬಳ್ಳಾಪುರ: ನಗರದ ಮಿನಿ ವಿಧಾನಸೌಧ ಆವರಣದಲ್ಲಿರುವ ಸಬ್ ರಿಜಿಸ್ಟರ್ ಕಚೇರಿ ಸದಾ ಜನದಟ್ಟಣೆಯ ತಾಣವಾಗಿದೆ. ಪ್ರತಿದಿನ ಜಮೀನು ನೋಂದಣಿಗೆ ಸಂಬಂಧಿಸಿದಂತೆ ನೂರಾರು ಜನರು ಕಚೇರಿಗೆ ಬರ್ತಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕೇವಲ ಮೂರು ಕೊಠಡಿಗಳಿದ್ದು ಕಚೇರಿ ವೇಳೆ ಸಂತೆಯ ವಾತಾವರಣ ಇರುತ್ತೆ. ಸಿಬ್ಬಂದಿ ಯಾರು ಜನ ಯಾರೆಂಬುದೇ ಗೊತ್ತಾಗದಂತೆ ಜನ ತುಂಬಿಯೇ ಇರ್ತಾರೆ. ಇದರ ಜೊತೆಗೆ ನೋಂದಣಿಗೆ ಬರುವ ವಾಹನಗಳ ಸಂಖ್ಯೆ ಸಹ ಹೆಚ್ಚಿರುತ್ತೆ. ಇದರಿಂದ ಪಾರ್ಕಿಂಗ್ ಮತ್ತು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.

ಇನ್ನು ನೂತನ ಸಬ್ ರಿಜಿಸ್ಟರ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಮುತ್ಯಾಲಮ್ಮ ದೇವಸ್ಥಾನದ ಬಳಿ ಜಾಗವನ್ನು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ಶಾಸಕ ಟಿ ವೆಂಕಟರಮಣಯ್ಯ ಹಳೇ ನಗರಸಭೆ ಕಚೇರಿಗೆ ಸ್ಥಳಾಂತರಿಸುವಂತೆ ಸಲಹೆ ನೀಡಿದ್ದಾರೆ. ಆದ್ರೆ ಸಬ್ ರಿಜಿಸ್ಟರ್ ಕಚೇರಿ ಮಿನಿ ವಿಧಾನಸೌಧದ ಆವರಣದಲ್ಲಿ ಇರಬೇಕೆಂಬುದು ಸಿಬ್ಬಂದಿ ವಾದ. ಕಚೇರಿಯಲ್ಲಿ 1800 ನೇ ಇಸವಿಯ ಹಳೆಯ ದಾಖಲೆಗಳಿದ್ದು, ಒಂದು ವೇಳೆ ಸಬ್ ರಿಜಿಸ್ಟರ್ ಕಚೇರಿಯನ್ನ ಮಿನಿ ವಿಧಾನಸೌಧದಿಂದ ಸ್ಥಳಾಂತರ ಮಾಡಿದ್ರೆ ದಾಖಲೆಗಳನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಸಬ್ ರಿಜಿಸ್ಟರ್ ಸತೀಶ್ ರವರ ವಾದ.

ಮಿನಿ ವಿಧಾನಸೌಧದ ಹಿಂಭಾಗದಲ್ಲಿ ಖಾಲಿ ಜಾಗವಿದ್ದು ಅಲ್ಲಿಯೇ ಸಬ್ ರಿಜಿಸ್ಟರ್ ಕಚೇರಿಯ ನೂತನ ಕಟ್ಟಡ ನಿರ್ಮಾಣವಾಗಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಿದೆ.

ಗುರುಪ್ರಸಾದ್, ಪಬ್ಲಿಕ್ ನೆಕ್ಸ್ಟ್,

ದೊಡ್ಡಬಳ್ಳಾಪುರ

Edited By : Manjunath H D
Kshetra Samachara

Kshetra Samachara

09/03/2022 05:18 pm

Cinque Terre

3.01 K

Cinque Terre

0

ಸಂಬಂಧಿತ ಸುದ್ದಿ