ಬೆಂಗಳೂರು: ಎಲ್ & ಟಿ ರಿಯಾಲ್ಟಿ ಡೆವಲಪರ್ಸ್ ಲಿ. ಸಂಸ್ಥೆಯು ಸಿ.ಎಸ್.ಆರ್ ಅಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 1 ಯಾಂತ್ರೀಕೃತ ಕಸ ಗುಡಿಸುವ ಯಂತ್ರವನ್ನು ಮಾನ್ಯ ಆಡಳಿತಗಾರರಾದ ರಾಕೇಶ್ ಸಿಂಗ್, ಮಾನ್ಯ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರಿಗೆ ಎಲ್ & ಟಿ ಯ ವ್ಯಾಪಾರ ಮುಖ್ಯಸ್ಥರಾದ ಶ್ರೀ ಬಿಜು ರಾಜ್ ಅವರು ಹಸ್ತಾಂತರಿಸಿದರು.
ಹಸ್ತಾಂತರದ ನಂತರ ಮಾನ್ಯ ಮುಖ್ಯ ಆಯುಕ್ತರು ಅವರು ಮಾತನಾಡಿ, ಎಲ್ & ಟಿ ಸಂಸ್ಥೆ ಸಿಎಸ್‌ಆರ್ ಅಡಿ ವಿನೂತನ ತಂತ್ರಜ್ಞಾನವುಳ್ಳ 1 ಟ್ರಕ್ ಮೌಂಟೆಡ್ ಯಾಂತ್ರೀಕೃತ ಕಸ ಗುಡಿಸುವ ಯಂತ್ರವನ್ನು ನೀಡಿದ್ದಾರೆ. ಅದನ್ನು ಪ್ರಮುಖ ರಸ್ತೆಗಳನ್ನು ಸ್ವಚ್ಛವಾಗಿಡಲು ಬಳಸಿಕೊಳ್ಳಲಾಗುವುದು. ಪಾಲಿಕೆಯಲ್ಲಿ ಈಗಾಗಲೇ ಕೆಲವು ಯಾಂತ್ರೀಕೃತ ಕಸ ಗುಡಿಸುವ ಯಂತ್ರಗಳಿದ್ದು, ಎಲ್ & ಟಿ ಸಂಸ್ಥೆಯ ರೀತಿ ಬೇರೆ ಸಂಸ್ಥೆಗಳು ಕೂಡಾ ಮುಂದೆ ಬಂದು ಸಿಎಸ್‌ಆರ್ ಅಡಿ ಪಾಲಿಕೆಗೆ ಹಸ್ತಾಂತರ ಮಾಡಿದರೆ ನಗರವನ್ನು ಮತ್ತಷ್ಟು ಸ್ವಚ್ಛವಾಗಿಸಲು ಸಹಕಾರಿಯಾಗಲಿದೆ ಎಂದರು.
ಟ್ರಕ್ ಮೌಂಟೆಡ್ ಯಾಂತ್ರೀಕೃತ ಕಸ ಗುಡಿಸುವ ಯಂತ್ರದ ಅಂದಾಜು ವೆಚ್ಚ 65 ಲಕ್ಷ ರೂ. ಗಳಿದ್ದು, 6 ಕ್ಯೂಬಿಕ್ ಮೀಟರ್ಸ್ ಮಣ್ಣಿನ ದೂಳನ್ನು ಸಂಗ್ರಹಿಸುವ ಸಾಮರ್ಥ್ಯವಿದೆ. ಸದರಿ ಯಂತ್ರವನ್ನು ಯಲಹಂಕ-ಬ್ಯಟರಾಯನಪುರದ ಪ್ರಮುಖ ರಸ್ತೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ.
Kshetra Samachara
07/03/2022 04:54 pm