ಬೆಂಗಳೂರು: ಬಿಡಿಎ ಭ್ರಷ್ಟಾಚಾರ ದಿಂದ ಕೂಡಿದೆ ಎಂಬ ಆರೋಪ ಎಸಿಬಿ ದಾಳಿಯ ಬಳಿಕ ಬಟಾ ಬಯಲಾಗಿದೆ.ಭ್ರಷ್ಟಾಚಾರ ಬೇರು ಸಮೇತ ಕಿತ್ತು ತೆಗೆದು ಹಾಕಲು ಪ್ರಾಧಿಕಾರ ಮುಂದಾಗಿದ್ದು,ಕೆಳ ಹಂತದ ಸಿಬ್ಬಂದಿಯ ಮೇಲೆ ಕ್ರಮಕ್ಕೆ ಮುಂದಾಗಿದೆ.
ಬಿಡಿಎ ಕೆಳ ಹಂತದ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ನೂರಾರು ಸಿಬ್ಬಂದಿಯ ಮೇಲೆ ಕಠಿಣ ಕ್ರಮ ತೆಗೆದು ಕೊಳ್ಳಲು ನಿರ್ಧರಿಸಲಾಗಿದೆ.
ಲಂಚಾವತಾರ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಎಸ್.ಆರ್.ವಿಶ್ವನಾಥ ಸೂಕ್ತ ಕ್ರಮದ ಸುಳಿವು ನೀಡಿದ್ದಾರೆ.
PublicNext
23/02/2022 02:37 pm