ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2 ಸಾವಿರ ಕೋಟಿ ರೂ. ನಷ್ಟದತ್ತ ರಾಜ್ಯ ಸಾರಿಗೆ ನಿಗಮಗಳು

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ, ಆಡಳಿತದಲ್ಲಿನ ಅವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ ಕಾರಣ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳಿಂದ ಮಾರ್ಚ್ ಅಂತ್ಯದ ವೇಳೆ 2,130 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ನಿಗಮಗಳು ಮೂಲಗಳ ಪ್ರಕಾರ ಸಾರಿಗೆ ನಿಗಮಗಳ ನಷ್ಟ ದೂರವಾಗಿಸಿ, ಲಾಭದಾಯಕ ಹಾದಿ ಕಂಡು ಹಿಡಿಯಲು ವರದಿ ನೀಡುವಂತೆ ರಚಿಸಲಾದ ಸಮಿತಿಯ ಅಧ್ಯಕ್ಷ, ನಿವೃತ್ತ ಅಧಿಕಾರಿ ಎಂ. ಆರ್‌.ಶ್ರೀನಿವಾಸ ಮೂರ್ತಿ ಜನವರಿ 31 ರವರೆಗೆ ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಕರೆ ನೀಡಿದ್ದಾರೆ.

ಕಳೆದ ಒಂದು ತಿಂಗಳಿನಲ್ಲೇ ಸಾಕಷ್ಟು ಸಭೆಗಳನ್ನು ನಡೆಸಿದ್ದಾರೆ. ಮೂರು ತಿಂಗಳಲ್ಲಿ ಸಮಿತಿಯ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಮಾರ್ಚ್ 28 ರೊಳಗಾಗಿ ವರದಿ ಸಿದ್ಧಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಸಲಹೆಗಳು ಬರುತ್ತಿದ್ದು, ಅವುಗಳನ್ನು ಪರಿಗಣಿಸಲಾಗುತ್ತಿದೆ.

Edited By :
Kshetra Samachara

Kshetra Samachara

29/01/2022 12:30 pm

Cinque Terre

348

Cinque Terre

0

ಸಂಬಂಧಿತ ಸುದ್ದಿ