ಬೆಂಗಳೂರು : ಬಿಎಂಟಿಸಿ ಐಷಾರಾಮಿ ಬಸ್ ವೋಲ್ವೋ ಬಿಳಿ ಆನೆ ಸಾಕಿದಂತೆ. ಜನರಿಗೆ ಐಷಾರಾಮಿ ಸಾರಿಗೆ ನೀಡಲು ಮುಂದಾದ ಬಿಎಂಟಿಸಿ ಇದೀಗ ಕೋಟಿ - ಕೋಟಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು.. ವೋಲ್ವೋ ಬಸ್ ರಸ್ತೆಗೆ ಇಳಿದ್ರು, ಇಳಿಯದಿದ್ರು ಅದರ ನಿರ್ವಹಣಾ ವೆಚ್ಚವನ್ನು ಬಿಎಂಟಿಸಿ ನೀಡಲೇ ಬೇಕು. ಇದೀಗ 570 ವೋಲ್ವೋ ಬಸ್ ಗಳು ಡಿಪೋ ದಲ್ಲಿ ತುಕ್ಕು ಹಿಡಿಯುತ್ತಿವೆ.
ಕೋವಿಡ್ ನಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಇರುವ 800 ವೋಲ್ವೋ ಬಸ್ ಗಳ ಪೈಕಿ 230 ಬಸ್ ಆಪರೇಟ್ ಆಗುತ್ತಿದೆ. ಒಟ್ಟು ಬಸ್ ಗಳ ನಿರ್ವಹಣೆ ವೆಚ್ಚ ವರ್ಷಕ್ಕೆ 10 ಕೋಟಿ. ಅತ್ತ ಸಾರಿಗೆ ನೌಕರರಿಗೆ ಸಂಬಳ ನೀಡಲು ಬಿಎಂಟಿಸಿಯಲ್ಲಿ ದುಡ್ಡಿಲ್ಲ. ಇಂತಹ ಸಂದರ್ಭದಲ್ಲಿ ಬಸ್ ಗಳು ಡಿಪೋದಲ್ಲಿ ತುಕ್ಕು ಹಿಡಿಯುತ್ತಿದ್ದು ದುಂದು ವೆಚ್ಚಕ್ಕೆ ಕಾರಣವಾಗಿದೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಪ್ರಶ್ನಿಸಿದಾಗ ಕೋವಿಡ್ ಕಾರಣದಿಂದ ಬಸ್ ನಿಂತಿವೆ. ನಿರ್ವಹಣಾ ವೆಚ್ಚ ಬರಿಸೋದು ಅನಿವಾರ್ಯ ಅಂತಾರೇ ಬಿಎಂಟಿಸಿ ನಿರ್ದೇಶಕರು.
PublicNext
27/01/2022 07:01 pm