ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಮುಚ್ಚದ ಇಬ್ಬರು ಕಾರ್ಯ ನಿರ್ವಾಹಕ ಎಂಜಿನಿಯರ್ ಗಳನ್ನು ಅಮಾನತು ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ. ಇದೇ ವೇಳೆ ನಾಲ್ವರು ಕಾರ್ಯ ಪಾಲಕ ಎಂಜಿನಿಯರ್ ಗಳಿಗೆ ನೋಟಿಸ್ ನೀಡಿದೆ.
ರಸ್ತೆಯನ್ನು ಗುಂಡಿ ಮುಕ್ತಗೊಳಿಸಲು ವಲಯವಾರು ಕೈಗೊಂಡಿರುವ ಕ್ರಮಗಳ ಬಗ್ಗೆ ಹಲವಾರು ಪರಿಶೀಲನೆ ಸಭೆ ನಡೆಸಲಾಗಿದೆ.
ಮುಖ್ಯ ರಸ್ತೆಗಳು, ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳ ಗುಂಡಿ ಮುಚ್ಚಲು ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಮುಖ್ಯ ಆಯುಕ್ತರು ಸೂಚಿಸಿದ್ದರು.
ಗಾಂಧಿನಗರದ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಎನ್ .ಎಸ್.ರೇವಣ್ಣ ಹಾಗೂ ಯಲಹಂಕ ಕಾರ್ಯಪಾಲಕ ಎಂಜಿನಿಯರ್ ಸಿ.ಎಂ. ಶಿವ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
Kshetra Samachara
03/01/2022 02:21 pm