ಬೆಂಗಳೂರು: ಸರ್ಕಾರಗಳು ಗುಣಮಟ್ಟದ ರಸ್ತೆ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡುತ್ತೆ. ಆದರೆ, ರಸ್ತೆಗಳೆಲ್ಲ ಮಾತ್ರ ಕಳಪೆ ಗುಣಮಟ್ಟದಿಂದಲೇ ಕೂಡಿರುತ್ತವೆ. ಹೌದು, ನಾವು ತೋರಿಸುವ ದೃಶ್ಯಾವಳಿ ನೋಡಿ... ಇದು ಮಹದೇವಪುರ ಕ್ಷೇತ್ರದ ಬೃಹತ್ ಮಹಾನಗರ ಪಾಲಿಕೆಯ ಪಕ್ಕದಲ್ಲಿನ ಡಾಂಬರೀಕರಣದ ಚಿತ್ರಣ!
ಇಲ್ಲಿ ಕೆಲ ತಿಂಗಳ ಹಿಂದಷ್ಟೇ ರಸ್ತೆ ಡಾಂಬರೀಕರಣಗೊಳಿಸಲಾಗಿತ್ತು. ಆದರೆ, ಅಧಿಕಾರಿಗಳ ಕಳಪೆ ಕಾಮಗಾರಿಯಿಂದಾಗಿ ರಸ್ತೆಯಿಡೀ ಗುಂಡಿಗಳೇ ತುಂಬಿಕೊಂಡಿವೆ.
ಇನ್ನು, ಗುಂಡಿಗಳಿಗೇ ಡಾಂಬರೀಕರಣ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಅಧಿಕಾರಿಗಳು ಗುರಿಯಾಗಿದ್ದಾರೆ.
ಅಷ್ಟೇ ಅಲ್ಲದೆ, ಈ ರಸ್ತೆಗಳು 'ನೆಲದ ಡೊಂಕನ್ನು ರಂಗೋಲಿಯಿಂದ ಮುಚ್ಚಿ, ಶೃಂಗಾರಗೊಳಿಸಿದಂತೆ' ಆಗಿದೆ ಎಂಬುದು ಸಾರ್ವಜನಿಕರ ಆರೋಪ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು, ಜವಾಬ್ದಾರಿ ಅರಿತುಕೊಂಡು ಗುಣಮಟ್ಟದ ರಸ್ತೆ ನಿರ್ಮಿಸಲು ಮುಂದಾಗುವರೇ ಕಾದು ನೋಡೋಣ.
Kshetra Samachara
14/12/2021 07:56 pm