ಎಕ್ಸ್ ಕ್ಲೂಸಿವ್ ವರದಿ: ಗಣೇಶ್ ಹೆಗಡೆ
ಬೆಂಗಳೂರು: ರಣಮಳೆಯಿಂದ ಸಿಲಿಕಾನ್ ಸಿಟಿಯಲ್ಲಿ ಎಲ್ಲೆಲ್ಲೂ ನೀರು. ಕಾರಣ ರಾಜಕಾಲುವೆ ಸಮೀಪವೇ ಮನೆಗಳ ನಿರ್ಮಾಣ ಮಾಡಿದ್ದು. ಇದೀಗ ಸಿಎಂ ಪಣ ತೊಟ್ಟಿದ್ದು, ಒತ್ತುವರಿದಾರರಿಗೆ ಶಾಕ್ ನೀಡಿದ್ದಾರೆ. ಆದರೆ, ಪಬ್ಲಿಕ್ ನೆಕ್ಸ್ಟ್ ಗೆ ವಿಶೇಷ ಪ್ರಕರಣವೊಂದು ದೊರೆತಿವೆ. ಇಷ್ಟೂ ದಿನ ಸಾರ್ವಜನಿಕರ ಮೇಲೆ ದೂರು, ಪಟ್ಟಿ ಮಾಡುತ್ತಿದ್ದ ಪಾಲಿಕೆಯೇ ಎನ್ ಜಿಟಿ ನಿಯಮ ಉಲ್ಲಂಘನೆ ಮಾಡಿರುವ ದೂರು ಕೇಳಿ ಬಂದಿದೆ.
ಬಸವನಗುಡಿ ವಿಧಾನಸಭಾ ಕ್ಷೇತ್ರದ ಚೆನ್ನಮ್ಮ ಕೆರೆ ಅಚ್ಚುಕಟ್ಟು ಆಟದ ಮೈದಾನದಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಟ್ಟಡದ ಕಾಮಗಾರಿಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ.
ಇದರ ಪಕ್ಕ ರಾಜ ಕಾಲುವೆ ಇದೆ. 50 ಅಡಿ ಒಳಗೆ ಬಿಲ್ಡಿಂಗ್ ನಿರ್ಮಾಣವಾಗುತ್ತಿದೆ. ಆ ಬಗ್ಗೆ ಪಾಲಿಕೆ ಅಧಿಕಾರಿ ವರ್ಗದ ಗಮನಕ್ಕೆ ತಂದ್ರೂ ಪ್ರಯೋಜನ ಇಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರು ಕಟ್ಟಡ ತೆರವು ಮಾಡ್ತೇವೆ ಅಂತಿದ್ದಾರೆ.
Kshetra Samachara
24/11/2021 10:57 am