ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಈಗ ಶಿಥಿಲ ಕಟ್ಟಡಗಳು ಕುಸಿಯುವ ಭೀತಿ ಹೆಚ್ಚಾಗಿದೆ. ಶಿಥಿಲಗೊಂಡ ಮತ್ತೊಂದು ಅಪಾರ್ಟ್ಮೆಂಟ್ ತೆರವುಗೊಳಿಸಲು ಬಿಬಿಎಂಪಿ ನೋಟಿಸ್ ನೀಡಿದೆ. ಹಲಸೂರಿನಲ್ಲಿರುವ KHB ಅಪಾರ್ಟ್ಮೆಂಟ್ಗೆ ನೋಟಿಸ್ ನೀಡಲಾಗಿದೆ. ಅಪಾರ್ಟ್ಮೆಂಟ್ನಲ್ಲಿ 27 ಕುಟುಂಬಗಳ ವಾಸ ಮಾಡುತ್ತಿವೆ. ಬಿಬಿಎಂಪಿ ನೋಟೀಸ್ ಬಂದ ಹಿನ್ನೆಲೆ 27 ಕುಟುಂಬಗಳು ಜೀವ ಭಯದಲ್ಲಿವೆ.
ಅಪಾರ್ಟ್ಮೆಂಟ್ ನಿವಾಸಿಗಳನ್ನು ಸ್ಥಳಾಂತರ ಮಾಡಲು ಬಿಬಿಎಂಪಿ KHBಗೆ ಸೂಚನೆ ನೀಡಿದೆ. ತಕ್ಷಣವೇ ನಿವಾಸಿಗಳನ್ನ ಸ್ಥಳಾಂತರಿಸದಿದ್ರೆ ಮುಂದಿನ ಅನಾಹುತಕ್ಕೆ ನೀವೇ ಹೊಣೆ ಎಂದು KHBಗೆ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕಟ್ಟಡ ಸುಮಾರು 35 ವರ್ಷಗಳಷ್ಟು ಹಳೆಯದಾಗಿದ್ದು ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದೆ.
Kshetra Samachara
19/10/2021 04:02 pm