ಕೆಂಗೇರಿ: ಕೆಸರಿನಿಂದ ಕೂಡಿರುವ ರಸ್ತೆಗಳು, ಸಾವಿಗಾಗಿ ರಸ್ತೆಮಧ್ಯೆ ಜವರಾಯನ ತರ ಬಾಯ್ತೆರೆದ ಗುಂಡಿಗಳು, ನಿಂತಲ್ಲೆ ನಿಂತ ವಾಹನಗಳು, ಈ ಮಧ್ಯೆ ಹರಸಾಹಸ ಮಾಡಿದ್ದಕ್ಕೆ ಗುಂಡಿಗೆ ಕುಸಿದ ಬಿಎಂಟಿಸಿ ಬಸ್.. ಕಳೆದ 2 ತಿಂಗಳಿಂದ ಈ ಕೆಂಗೇರಿ ವಾರ್ಡ್ ನ ಕೋಡಿಪಾಳ್ಯದಲ್ಲಿ ಸಾರ್ವಜನಿಕರು, ವಾಹಸವಾರರು ಇದೇ ಪರಿಸ್ಥಿತಿ ಎದುರಿಸುತ್ತಾ ಇದ್ದಾರೆ..ಇಷ್ಟು ಆಳವಾದ ಗುಂಡಿ ರಸ್ತೆ ಮಧ್ಯದಲ್ಲಿರೋದ್ರಿಂದ, ಗೊತ್ತಿಲ್ಲದೆ ಬಂದ ವಾಹನ ಸವಾರರು ಇದಕ್ಕೆ ಬಲಿಯಾಗುತ್ತಿದ್ದಾರೆ.. ವಾಹನಗಳನ್ನು ಮೇಲೆತ್ತಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ, ಯಾರು ಈ ಕಡೆ ಬಾರದಂತೆ ಮುಂಜಾಗ್ರತಾ ಕ್ರಮವಾಗಿ, ಇಲ್ಲಿನ ವ್ಯಾಪಾರಸ್ಥರೇ ಬ್ಯಾರಿಗೇಟರ್ಗಳನ್ನ ಹಾಕುತ್ತಿದ್ದಾರೆ.. ಇದ್ರಿಂದ ರಸ್ತೆ ಪೂರ್ತಿಯೂ ಟ್ರಾಫಿಕ್ ಜಾಮ್ ಆಗಿದೆ.. ಇನ್ನು ನಿಂತಲ್ಲೇ ನಿಂತಿರುವ ಜಲಮಂಡಳಿಯ ಕಾಮಗಾರಿಯಿಂದ, ಇಲ್ಲಿನ ವಾಹಸವಾರರು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ
ಬೇಗ ಕೆಲಸ ಮಾಡಿ ಮುಗಿಸಿ ಅಂತ ವ್ಯಾಪಾರಸ್ಥರು ಕೇಳಿದ್ರೆ, ರಾತ್ರಿ ಟೈಂ ಕೆಲಸ ಮಾಡ್ತೀವಿ ಅಂತ ಹೇಳ್ತಿದ್ದಾರಂತೆ, ಅದು ಯಾವ ಟೈಂ ನಲ್ಲಿ ಕೆಲಸ ಮಾಡ್ತಿದ್ದಾರೊ ಆ ದೇವ್ರಿಗೆ ಗೊತ್ತು.. ಕೆಲಸ ಪ್ರಾರಂಭವಾಗಿ 2 ತಿಂಗಳಾದ್ರು, ಇನ್ನೂ ಅರ್ಧ ಕಿಮೀ ಕೆಲಸ ಮುಗಿದಿಲ್ಲ, ಇಲ್ಲಿನ ಅಂಗಡಿಗಳ ಮುಂದೆ ಕಾಮಗಾರಿಯ ಗಾಡಿಗಳನ್ನ ಬಿಟ್ಟು ಹೋಗಿದ್ದಾರೆ. ಇದ್ರಿಂದ ಇಲ್ಲಿನ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ.. ಇನ್ನೂ ಈ ಬಗ್ಗೆ ಕಾಮಗಾರಿಯ ಇಂಜಿನಿಯರಿಂಗ್ ಏನೇಳ್ತಾರೆ ಕೇಳೋಣ ಬನ್ನಿ..
ಸದ್ಯ ಈ ಸಮಸ್ಯೆಗೆ ಆದಷ್ಟು ಬೇಗ ಮುಕ್ತಿ ಸಿಗಬೇಕಿದೆ ಅನ್ನೋದು ವ್ಯಾಪಾರಸ್ಥರ ಮನವಿ. ಕಾಮಗಾರಿ ಮುಗಿಯುವಷ್ಟರಲ್ಲಿ ಇನ್ನೂ ಎಷ್ಟು ಜಷನ ಬಲಿಯಾಗ್ತಾರೋ ಗೊತ್ತಿಲ್ಲ. ಅದಕ್ಕೆ ಯಾವುದೇ ಪ್ರಾಣಾಪಾಯ ಆಗುವ ಮುಂಚಿತವಾಗಿ ಕಾಮಗಾರಿ ಮಾಡಿ ಮುಗಿಸೋದು ಒಳ್ಳೆಯದು..
ರಂಜಿತಸುನಿಲ್, ಪಬ್ಲಿಕ್ ನೆಕ್ಟ್, ಬೆಂಗಳೂರು..
PublicNext
31/03/2022 03:19 pm