ರಾಜಧಾನಿಯ ಜಯಮಹಾಲ್ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ರಸ್ತೆಯನ್ನೆಲ್ಲ ಅಗೆದು ಹೇಗೆ- ಬೇಕೋ ಹಾಗೆ ಹಾಳು ಮಾಡಿಟ್ಟಿದ್ದಾರೆ. ಆದ್ರೆ ಈ ರಸ್ತೆಯಲ್ಲಿ ನಿತ್ಯ ಸಂಚಾರಿಸುವ ಜನರು ರಸ್ತೆಯಿಂದ ಹೈರಾಣಾಗಿ ಹೋಗಿದ್ದಾರೆ. ರಸ್ತೆಯುದ್ದಕ್ಕೂ ಧೂಳು. ರಸ್ತೆಯಲ್ಲಿ ಕಾಲಿಡಲಾಗದ ಮಟ್ಟಿಗೆ ಧೂಳು. ಈ ಒಂದು ಜಯಮಹಾಲ್ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರಿಸುತ್ತೆ. ಆದ್ರೆ ಈಗ ಸಂಚಾರಿಸದ ಮಟ್ಟಿಗೆ ರಸ್ತೆ ಹದಗೆಟ್ಟಿದೆ. ಈ ರಸ್ತೆಯ ಎಡ ಭಾಗದಲ್ಲಿ ನಿತ್ಯ ಹಣ್ಣುಗಳನ್ನ ಮಾರಾಟ ಮಾಡ್ತಿದ್ರು. ಆದ್ರೆ ರಸ್ತೆ ಕಾಮಗಾರಿ ಮಾಡ್ತಿರುವುದರಿಂದ ಅವರನ್ನ ಇಲ್ಲಿಂದ ಖಾಲಿ ಮಾಡಿಸಲಾಗಿದೆ. ಆದ್ರೆ ಕಾಮಗಾರಿನಾದ್ರು ಬೇಗ ಮುಗಿಯುತ್ತೆ ಅಂದ್ರೆ ಇನ್ನು ಮುಗಿತ್ತಿಲ್ಲ. ಈಗ ನಡೆಯುತ್ತಿರುವ ಕಾಮಗಾರಿ ಕುಂಟುತ್ತಾ ಸಾಗ್ತಿದ್ದು ಜನರಂತೂ ರೋಸಿ ಹೋಗಿದ್ದಾರೆ.
ಜಯಮಹಾಲ್ ರಸ್ತೆ ಮಾರ್ಕೆಟ್ ,ಮೆಜೆಸ್ಟಿಕ್ ಹೀಗೆ ನಾನಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಈ ಒಂದು ರಸ್ತೆಯನ್ನ ಪೈಪ್‌ಲೈನ್‌ಗಾಗಿ ಅಗೆಯಲಾಗಿದೆ. ಅಗೆದ ನಂತರ ಬೇಗ ರಸ್ತೆಯ ಕಾಮಗಾರಿ ಮಾಡಬೇಕು. ಆದ್ರೆ 3 ತಿಂಗಳಾಗಿದೆ ರಸ್ತೆ ಅಗೆದು ಇನ್ನು ಕಾಮಗಾರಿ ಮಾಡಿಲ್ಲ. ಹೀಗಾಗಿ ಬಸ್ ನಿಲ್ದಾಣದಲ್ಲಿ ನಿಲ್ಲಲಾಗದೇ ಜನರಂತೂ ಹೈರಾಣಾಗಿ ಹೋಗಿದ್ದಾರೆ. ಈ ರಸ್ತೆಯಲ್ಲಿ ಸಂಚಾರಿಸುವ ಜನರು ಯಾವಾಗ ಕಾಮಗಾರಿ ಮುಗಿಯುತ್ತೋ ಅಂತಿದ್ದಾರೆ. ವಾಹನಸವಾರರು ಧೂಳಿನ ನಡುವೆ ವಾಹನ ಚಾಲಿಸುತ್ತಿದ್ರೆ, ಬಸ್ ನಿಲ್ದಾಣದಲ್ಲಿ ಇರಲಾಗದೇ ಜನರು ಪರದಾಟ ನಡೆಸುತ್ತಿದ್ದಾರೆ. ಜೊತೆಗೆ ಬೇಗ ಕಾಮಗಾರಿ ಮುಗಿಸಿ ಅಂತಾ ಜನರು ಸರ್ಕಾರದ ವಿರುದ್ಧ, ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.
ವರದಿ: ಗೀತಾಂಜಲಿ
PublicNext
15/07/2022 11:59 am