ಇದು ಕೆಂಗೇರಿಯಿಂದ 2 ಕಿಮೀ ಮುಂದೆ ಅಂಚೆಪಾಳ್ಯ ಬಳಿ ಇರುವ ರಸ್ತೆ.. ಈ ಹಿಂದೆ ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿಯನ್ನೂ ಮಾಡಿತ್ತು..
ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಗುಂಡಿಗಳೇ ರಾರಾಜಿಸುತ್ತಿರುವ ಈ ರಸ್ತೆಗಳಲ್ಲಿ ರಾಜರಾಜೇಶ್ವರಿ ಆಸ್ಪತ್ರೆ, ಪ್ರತಿಷ್ಠಿತ ಕೆಂಪಮ್ಮ, ಪಂಚಮುಖಿ ಗಣಪತಿ ದೇವಸ್ಥಾನಗಳಿವೆ. ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸೋದು ಸವಾರರಿಗೆ ನಿಜಕ್ಕೂ ದೊಡ್ಡ ಸವಾಲಾಗಿದೆ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗ್ತಿದ್ದಂತೆ ಗುಂಡಿಗಳಿಗೆ ಜೆಲ್ಲಿ ಕಲ್ಲು ತುಂಬಿ ತೇಪೆ ಹಚ್ಚುವ ಕಾರ್ಯ ಮಾಡಿ ಹೋಗಿದ್ದಾರೆ. ಇದ್ರ ಬಗ್ಗೆ ಸಂಕ್ಷಿಪ್ತ ವರದಿಯನ್ನ ನಮ್ಮ ರಿಪೋರ್ಟರ್ ವಾಕ್ ಥ್ರೂ ನಲ್ಲಿ ನೀಡಿದ್ದಾರೆ ನೋಡೋಣ ಬನ್ನಿ..
PublicNext
09/06/2022 06:44 pm