ಯಲಹಂಕ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಇಲ್ಲಿನ ರಸ್ತೆಗಳು ಮೋರಿಗಳು ಎಲ್ಲಾ ಕ್ಲೀನ್ ಆಗಿದೆ ಅಂತ ಹೇಳುವ ಶಾಸಕ ವಿಶ್ವನಾಥ್‌ರವರೇ ನಿಮ್ಮದೇ ಕ್ಷೇತ್ರದ ಜನರ ಕಷ್ಟ ಸ್ವಲ್ಪ ನೋಡಿ. ಇಲ್ಲಿ ಜನ ರಸ್ತೆಗಳಲ್ಲಿ ಓಡಾಡ್ತಿದ್ದಾರೋ ಅಥವಾ ಕೆಸರು ಗದ್ದೆಯಲ್ಲಿ ಓಡಾಡ್ತಿದ್ದಾರೋ ಗೊತ್ತಿಲ್ಲ.
ಅಂದಹಾಗೇ ಈ ದೃಶ್ಯ ಕಾಣ್ತಿರೋದು ಯಲಹಂಕ ವಿಧಾನಸಭಾ ಕ್ಷೇತ್ರದ ಮಾಚೋಹಳ್ಳಿ ಗ್ರಾಮದಲ್ಲಿ. ಹೇಳಿಕೊಳ್ಳೋಕೆ ಸ್ಥಳೀಯ ಸಂಸ್ಥೆ ನಾಯಕರೂ ಕೂಡ ನಿಮ್ಮದೇ ಪಕ್ಷದ ಜನಪ್ರತಿನಿಧಿಗಳು. ಹೀಗಿದ್ರು ಇಲ್ಲಿನ ನಾಯಕರು ಮಾತ್ರ ಜನ ನಿತ್ಯ ನರಕ ದರ್ಶನ ಮಾಡ್ತಿದ್ರು ಡೋಂಟ್ ಕೇರ್ ಮನಸ್ಥಿತಿ ತೋರ್ತಿದ್ದಾರೆ. ಮಕ್ಕಳು ಮಹಿಳೆಯರಂತೂ ಈ ರಸ್ತೆಯಲ್ಲಿ ಜೀವ ಕೈಲಿಡಿದು ಓಡಾಡ್ತಿದ್ದಾರೆ. ಇನ್ನಾದ್ರು ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಕೆಸರು ರಸ್ತೆಗೆ ಮೂಕ್ತಿ ನೀಡಬೇಕು ಅಂತ ಪಬ್ಲಿಕ್ ಪರವಾಗಿ ಪಬ್ಲಿಕ್ ನೆಕ್ಸ್ಟ್ ಆಗ್ರಹಿಸ್ತಿದೆ.
PublicNext
09/09/2022 12:02 pm