ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ಟೀಲ್ ಬ್ರಿಡ್ಜ್ ಬಗ್ಗೆ ಆರಂಭದಲ್ಲೇ ಅಪಸ್ವರ; ಜನರಿಗೆ ಭಯ ಹುಟ್ಟಿಸಿದ ಪ್ರಾಯೋಗಿಕ ಸಂಚಾರ

ಶಿವಾನಂದ ಸರ್ಕಲ್ ನಲ್ಲಿ 40 ಕೋಟಿ ಖರ್ಚಿನಲ್ಲಿ ನಿರ್ಮಾಣವಾದ ಉಕ್ಕಿನ ಸೇತುವೆ ಬಗ್ಗೆ ಆರಂಭದಲ್ಲೇ ಅಪಸ್ವರ ಶುರುವಾಗಿದೆ. ಭಾರೀ ವಾಹನಗಳು ಸೇತುವೆ ಮೇಲೆ ಹೋಗುವಾಗ ಎದೆ ಝಲ್ ಎನಿಸುವ ಶಬ್ಧ ಕೇಳಿಸುತ್ತಿದೆ. ಬಿಬಿಎಂಪಿ ಅಧಿಕಾರಿಗಳ ಮತ್ತೊಂದು ಮಹಾ ಎಡವಟ್ಟು ಕಾಮಗಾರಿ ಈಗ ಬಯಲಾಗಿದೆ. ಚೊಚ್ಚಲ ಸ್ಟೀಲ್ ಬ್ರಿಡ್ಜ್ ಗೆ ಇದೀಗ ಮಹಾಕಂಟಕ ಎದುರಾಗಿದೆ.

ಆರಂಭದಲ್ಲೇ ಬಿಬಿಎಂಪಿ ಮೇಲೆ ಕಳಪೆ ಕಾಮಗಾರಿ ಆರೋಪ ಕೇಳಿ ಬರುತ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಟೀಲ್ ಬ್ರಿಡ್ಜ್ ವಾಹನ ಓಡಾಟಕ್ಕೆ ಯೋಗ್ಯವಲ್ಲವಾ ಅನ್ನುವ ಪ್ರಶ್ನೆ ಶುರುವಾಗಿದೆ. ಪ್ರಾಯೋಗಿಕ ಸಂಚಾರದಲ್ಲೇ ಬಿಬಿಎಂಪಿ ಕಳಪೆ ಕಾಮಗಾರಿ ಬಯಲಾಯ್ತು. ಆಗಸ್ಟ್ 15ರಂದು ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶವನ್ನ ಪಾಲಿಕೆ ಮಾಡಿಕೊಟ್ಟಿದೆ. ಉಕ್ಕಿನ ಸೇತುವೆಯ ಒಂದು ಪ್ರಾಯೋಗಿಕ ಸಂಚಾರದಲ್ಲೇ ಬಿಬಿಎಂಪಿ ಕಳಪೆ ಕಾಮಗಾರಿ ಈಗ ಬಟಾ ಬಯಲಾಗಿದೆ.

ಭಾರಿ ವಾಹನಗಳ ಸಂಚಾರದ ವೇಳೆ ಸ್ಟೀಲ್ ಬ್ರಿಡ್ಜ್ ಶೇಕ್ ಆಗ್ತಿದೆ. ದೊಡ್ಡ ಮಟ್ಟದ ಶಬ್ಧ ಬರ್ತಿದೆ. ಒಂದೇ ಸಮನೆ ವಾಹನ ಸಂಚಾರ ಮಾಡಿದ್ರೆ ಸಾಕು ಸ್ಟೀಲ್ ಬ್ರಿಡ್ಜ್ ಫುಲ್ ವೈಬ್ರೇಟ್ ಆಗುತ್ತೆ. ಈ ಮೂಲಕ ಬಿಬಿಎಂಪಿಯ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಕಳಪೆ ಎಂಬುದು ಸಾಬೀತಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಸಾಲು ಸಾಲು ಕಂಪ್ಲೇಟ್ ಹೋಗಿದೆ. ಕೇವಲ ವೈಬ್ರೇಷನ್ ಅಲ್ಲ. ರಸ್ತೆ ತುಂಬಾ ಉಬ್ಬು ನಿರ್ಮಾಣ ಎಂದು ಜನರು ಕಿಡಿಕಾರುತ್ತಿದ್ದಾರೆ.

ಇನ್ನು ರಸ್ತೆ ಉಬ್ಬಾಗಿರುವ ಬಗ್ಗೆ ಬಿಬಿಎಂಪಿ ಸ್ಪಷ್ಟೀಕರಣ ನೀಡಿದೆ. ಇನ್ನೇನು ಸೆಪ್ಟೆಂಬರ್ ಮೊದಲ ವಾರದಲ್ಲಿ ಸ್ಟೀಲ್ ಬ್ರಿಡ್ಜ್ ನ್ನ ಸಿಎಂ ಉದ್ಘಾಟನೆ ಮಾಡುವ ಸಾಧ್ಯತೆ ಇತ್ತು. ಆದ್ರೆ ಅಷ್ಟರಲ್ಲಿ ಸ್ಟೀಲ್ ಬ್ರಿಡ್ಜ್ ಎಡವಟ್ಟು ಬಯಲಾಗಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಗೆ ಬಿಬಿಎಂಪಿ ಚೀಫ್ ಇಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ. ನಾವು ಪ್ರಾಯೋಗಿಕವಾಗಿ ಉಕ್ಕಿನ ಸೇತುವೆಯ ಒಂದು ರಸ್ತೆ ಓಪನ್ ಮಾಡಿದ್ದೇವೆ. ರಸ್ತೆ ಉಬ್ಬು, ಶೇಕ್ ಮತ್ತು ವೈಬ್ರೇಷನ್ ಬಗ್ಗೆ ಸಾರ್ವಜನಿಕರು ಕಂಪ್ಲೇಂಟ್ ಮಾಡುತ್ತಿದ್ದಾರೆ. ಘನ ವಾಹನಗಳು ಹೋಗುವಾಗ ವೈಬ್ರೇಷನ್ ಆಗುತ್ತಿದೆ. ಅದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಇವೆಲ್ಲವನ್ನೂ ಪತ್ತೆ ಹಚ್ಚಲೆಂದೇ ನಾವು ಪ್ರಾಯೋಗಿಕ ಸಂಚಾರ ಶುರು ಮಾಡಿದ್ದೇವೆ ಎಂಬುದಾಗಿ ಲೋಕೇಶ್ ಹೇಳಿದ್ದಾರೆ.

Edited By :
PublicNext

PublicNext

23/08/2022 04:49 pm

Cinque Terre

31.8 K

Cinque Terre

2

ಸಂಬಂಧಿತ ಸುದ್ದಿ