ಅವೈಜ್ಞಾನಿಕವಾಗಿ ಚರಂಡಿಯನ್ನು ನಿರ್ಮಾಣ ಮಾಡಲಾಗಿದ್ದು, ಈ ಚರಂಡಿ ನಿರ್ಮಾಣದಿಂದಾಗಿ ಮನೆಗಳ ಪ್ರವೇಶಕ್ಕೆ ಬ್ರೇಕ್ ಬಿದ್ದಿದೆ! ಮನೆಗಳ ಬಾಗಿಲು ಮಟ್ಟಕ್ಕಿಂತ ಎತ್ತರಕ್ಕೆ ಚರಂಡಿ ಕಾಮಗಾರಿ ಮಾಡಲಾಗಿದ್ದು, ಇಂಜಿನಿಯರ್ ನ ಚರಂಡಿ ನಿರ್ಮಾಣ "ಕೌಶಲ್ಯ" ನಗೆಪಾಟಲಿಗೆ ಗುರಿಯಾಗಿದೆ.
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಮುತ್ಸಂದ್ರ ವಾರ್ಡ್ ನಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ನಗೆಪಾಟಲಿಗೆ ಗುರಿಯಾಗಿದೆ. ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ SFC ವಿಶೇಷ ಅನುದಾನದಡಿ ಚರಂಡಿ ಮತ್ತು ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಆದರೆ, ಮುತ್ಸಂದ್ರ ವಾರ್ಡ್ ನಲ್ಲಿ ನಡೆಯುತ್ತಿರುವ ಕಾಮಗಾರಿ ಕಾಟಾಚಾರಕ್ಕೆ ಮಾಡುವಂತಿದೆ. ಮನೆಗಳ ಬಾಗಿಲು ಮಟ್ಟದಿಂದ ಕೆಳಗೆ ಚರಂಡಿ ನಿರ್ಮಾಣ ಮಾಡುವ ಬದಲಿಗೆ, ಬಾಗಿಲು ಮಟ್ಟಕ್ಕಿಂತ ಎತ್ತರದಲ್ಲಿ ಚರಂಡಿ ನಿರ್ಮಾಣ ಮಾಡಿದ್ದಾರೆ. ಜನರು ತಮ್ಮ ಮನೆಗಳಿಗೂ ಹೋಗದಂತೆ ಬಂದ್ ಮಾಡಿದೆ ಚರಂಡಿ ಕಾಮಗಾರಿ.
ಮನೆಗಳ ಬಾಗಿಲು ಮಟ್ಟಕ್ಕಿಂತ ಎತ್ತರದಲ್ಲಿ ಚರಂಡಿ ನಿರ್ಮಾಣ ಮಾಡಿರುವುದರಿಂದ ಇಲ್ಲಿನ ಜನರು ಸಾಕಷ್ಟು ಸಮಸ್ಯೆ ಎದುರಿಸ ಬೇಕಾಗಿದೆ. ವಯಸ್ಸಾದವರು ಎತ್ತರದ ಚರಂಡಿಗಳನ್ನ ದಾಟಲು ಸಾಧ್ಯವಿಲ್ಲ. ಮಳೆನೀರು ಚರಂಡಿಗೆ ಹರಿದು ಹೋಗದೆ ಮನೆಗೇ ನುಗ್ಗುತ್ತವೆ.
ಜನರ ಅನುಕೂಲಕ್ಕಾಗಿ ಇರಬೇಕಾದ ಚರಂಡಿಗಳು ಇಲ್ಲಿ ಜನರಿಗೆ ತೊಂದರೆ ಕೊಡುತ್ತಿವೆ. ಇನ್ನು, ಈ ಚರಂಡಿ ವಿನ್ಯಾಸ ಮಾಡಿದ ಇಂಜಿನಿಯರ್ ಮತ್ತು ಗುತ್ತಿಗೆದಾರನ ವೃತ್ತಿ ಕೌಶಲ್ಯವನ್ನೇ ಪ್ರಶ್ನೆ ಮಾಡುವಂತಿದೆ.
PublicNext
20/08/2022 02:21 pm