ಬಿಬಿಎಂಪಿ ಅಧೀನದಲ್ಲಿ ಪ್ರತಿ ಆಸ್ತಿಯನ್ನು ಜಿಐಎಸ್ ಮ್ಯಾಪಿಂಗ್ ಬಳಸಿ ಸಂರಕ್ಷಣೆಗೆ ಪಾಲಿಕೆ ಮುಂದಾಗಿದೆ.
ಹೌದು... ಅಕ್ರಮ ಆಸ್ತಿ ಸಂಪಾದಿಸಿಟ್ಟು ತೆರಿಗೆ ವಂಚಿಸುತ್ತಿರುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಬಿಸಿ ಮುಟ್ಟಿಸುವ ಕಾರ್ಯ ಸದ್ದಿಲ್ಲದೆ ಆರಂಭವಾಗುತ್ತಿದೆ.
ಪಾಲಿಕೆ ಒಡೆತನದಲ್ಲಿ 6215 ಸ್ವತ್ತುಗಳಿವೆ. ಇದರಲ್ಲಿ 324 ಆಸ್ತಿಗಳನ್ನು ಬಾಡಿಗೆ ನೀಡಲಾಗಿದೆ. 163 ಆಸ್ತಿಗಳ ಗುತ್ತಿಗೆ ಮುಗಿದಿದ್ದು, ಈ ಪೈಕಿ 7 ಸ್ವತ್ತುಗಳನ್ನು ಪಾಲಿಕೆ ವಶಕ್ಕೆ ಪಡೆದುಕೊಂಡಿದೆ. ಇನ್ನುಳಿದ ಆಸ್ತಿಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ. ದೀಪಕ್ ತಿಳಿಸಿದರು.
ಇನ್ನೂ ಜಿಯೋ ಮ್ಯಾಪಿಂಗ್ ಇನ್ಫಾರ್ಮೇಶನ್ ಸಿಸ್ಟಮ್ ಅನ್ನು ಸಮರ್ಪಕವಾಗಿ ಮಾಡಿಕೊಳ್ಳುವುದರಿಂದ ತಪ್ಪಾಗಿ ವಲಯ ವರ್ಗೀಕರಣ ನಮೂದಿಸಿ ಕಡಿಮೆ ತೆರಿಗೆ ಪಾವತಿ ಮಾಡುತ್ತಿದ್ದ ಆಸ್ತಿ ಮಾಲೀಕರನ್ನು ಪತ್ತೆ ಮಾಡಬಹುದು. ಆಸ್ತಿ ಎಷ್ಟಿದೆ, ವಿಸ್ತೀರ್ಣ ಎಷ್ಟು ಎಂಬುದೆಲ್ಲ ಜಿಐಎಸ್ ಮ್ಯಾಪಿಂಗ್ ನಿಂದ ತಿಳಿಯಲಿದೆ.
PublicNext
20/06/2022 03:25 pm