ಬಾಶೆಟ್ಟಿಹಳ್ಳಿಯ ರೈಲ್ವೆ ಮೇಲ್ಸೇತುವೆ ವಿಶೇಷವೇ ಪದೇ ಪದೇ ಕುಸಿಯೋದು,ನಾಲ್ಕು ವರ್ಷದ ಮೇಲ್ಸೇತುವೆ ನಾಲ್ಕನೇ ಬಾರಿ ಕುಸಿದಿದೆ. ಮೇಲ್ಸೇತುವೆ ಕುಸಿದಾಗ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭೇಟಿ ಮಾಮೂಲಿಯಾಗಿದೆ ಹೊರತು ಜನರ ಆತಂಕವನ್ನ ದೂರ ಮಾಡುವರು ಯಾರು ಇಲ್ಲ.
ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಯ ಬಾಶೆಟ್ಟಿಹಳ್ಳಿಯ ಬಳಿ ರೈಲ್ವೆ ಗೇಟ್ ಇದ್ದು, ರೈಲ್ವೆ ಗೇಟ್ ನಿಂದ ವಾಹನ ದಟ್ಟನೆಯಿಂದಾಗಿ 10 ರಿಂದ 15 ನಿಮಿಷ ರೈಲ್ವೆ ಗೇಟ್ ಬಳಿಯ ವಾಹನ ಸವಾರರು ಕಾಯಬೇಕಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಸುಮಾರು 42 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಿದೆ. ಮೇಲ್ಸೇತುವೆ ಜನರ ಖುಷಿಗೆ ಕಾರಣವಾಗ ಬೇಕಿತ್ತು. ಆದರೆ ಉದ್ಘಾಟನೆಗೂ ಮುನ್ನವೇ ತಡೆಗೋಡೆಯ ಸ್ಲ್ಯಾಬ್ ಕಳಚಿ ಬಿದ್ದು ವಾಹನ ಸವಾರರ ಆತಂಕವನ್ನ ಹೆಚ್ಚು ಮಾಡಿದೆ. ಇದೀಗ 4 ನೇ ಬಾರಿ ತಡೆಗೋಡೆಯ ಸ್ಲ್ಯಾಬ್ ಗಳು ಕಳಚಿ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಮೇಲ್ಸೇತುವೆಯ ಕುಸಿಯೋದು ಪಕ್ಕಾ ಅನ್ನುವಂತೆ ಮಾಡಿದೆ.
ಮೇಲ್ಸೇತುವೆಯನ್ನ ನೈರುತ್ವ ರೈಲ್ವೆ, ಕೆಆರ್ ಡಿಸಿಎಲ್ ಮತ್ತು ಟೋಲ್ ನವರ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ. ದುರ್ದೈವ ಅಂದರೆ ಮೇಲ್ಸೇತುವೆಯ ನಿರ್ವಹಣೆ ಮಾತ್ರ ಯಾರು ಮಾಡುತ್ತಿಲ್ಲ. ಪ್ರತಿ ಬಾರಿ ಮೇಲ್ಸೇತುವೆ ಕುಸಿದಾಗ ಒಬ್ಬರು ಮತ್ತೂಬ್ಬರ ಮೇಲೆ ಹೇಳಿ ನುಣುಚಿಕೊಳ್ಳುತ್ತಾರೆ. ಮೇಲ್ಸೇತುವೆ ಕುಸಿದಾಗ ಶಾಸಕರು ಅಧಿಕಾರಿಗಳು ತಂಡದೊಂದಿಗೆ ಭೇಟಿ ನೀಡೊದು ಮಾಮೂಲಾಗಿದೆ. ಮೇಲ್ಸೇತುವೆಯ ಕುಸಿದ ತಡೆಗೆ ಶಾಶ್ವತ ಪರಿಹಾರ ಮಾತ್ರ ಯಾರಿಂದಲೂ ಸಿಕ್ಕಿಲ್ಲ ಎಂದು ಜನರು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಮೇಲ್ಸೇತುವೆಯ ಅವ್ಯವಸ್ಥೆ ಇಷ್ಟಕ್ಕೆ ನಿಂತಿಲ್ಲ. ಮೇಲ್ಸೇತುವೆಯ ಮೇಲೆ ಅಡಿಗೊಂದು ಗುಂಡಿಗಳಿವೆ. ಗುಂಡಿಗಳನ್ನ ತಪ್ಪಿಸಲು ಹೋಗಿ ಬಿದ್ದು ವಾಹನ ಸವಾರರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಳಪೆ ಕಾಮಾಗಾರಿಯಿಂದ ಜನರ ಪ್ರಾಣಕ್ಕೆ ಕಂಠಕವಾಗಿರುವ ಮೇಲ್ಸೇತುವೆ ಕೆಡವಿ ಗುಣಮಟ್ಟದ ಸೇತುವೆ ಕಟ್ಟಬೇಕಿರುವುದು ಎಲ್ಲಾ ಸಮಸ್ಯೆಗೂ ಪರಿಹಾರವಾಗಲಿದೆ.
PublicNext
21/05/2022 11:57 am