ಯಲಹಂಕ: ಯಲಹಂಕ ತಾಲೂಕು ಕಚೇರಿ ಆವರಣದ ಮುಂಭಾಗ ಅಶ್ವಾರೂಢ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು. ಮೊದಲಿಗೆ ಯಲಹಂಕದ ಕೆಂಪೇಗೌಡ ಸರ್ಕಲ್ ನಲ್ಲಿದ್ದ ಮೂಲ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಮೂಲ ಪ್ರತಿಮೆ ಇದ್ದ ಸ್ಥಳದಿಂದ ರಥದಲ್ಲಿ ಕೆಂಪೇಗೌಡರ ಮೂರ್ತಿ ಇಟ್ಟು ಸಾವಿರಾರು ಜನ ತಾಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿದರು. ಶಾಸಕ ವಿಶ್ವನಾಥ್ & ಯಲಹಂಕದ ಸಾವಿರಾರು ಜನ ಕೆಂಪೇಗೌಡರ ಅಭಿಮಾನಿಗಳು ಎನ್ ಇಎಸ್ ಬಳಿಯ ತಾಲೂಕು ಕಚೇರಿವರೆಗಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತಾಲೂಕು ಕಚೇರಿ ಆವರಣದಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಲಾಗಿದ್ದ ಅಶ್ವಾರೂಢ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಶಾಸಕ ವಿಶ್ವನಾಥ್, ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತರಾದ ಪೂರ್ಣಿಮಾರವರು ಅನಾವರಣಗೊಳಿಸಿದ್ರು. ಸಾವಿರಾರು ಜನ ನೆರೆದಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಕೆಂಪೇಗೌಡರ ಗುಣಗಾನ ಮಾಡಿದರು.
ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ ಪ್ರಯಕ್ತ ಯಲಹಂಕ ತಾಲೂಕು ಕಚೇರಿ ಅವರಣದಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ..
PublicNext
27/06/2022 04:33 pm