ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭೂಸ್ವಾಧಿನ ವಿರೋಧಿಸಿ ದೇವನಹಳ್ಳಿ ಬಂದ್‌ಗೆ ಕರೆ:-ಪೊಲೀಸರ‌ವಿರೋಧದ ನಡುವೆ ಪ್ರತಿಭಟನಾ Rally ಪಂಜಿನ ಮೆರವಣಿಗೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ‌ಜಿಲ್ಲೆ‌ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಿಂದ KIADB 1800 ಎಕರೆ ರೈತರ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನಕ್ಕೆ ಮುಂದಾಗಿದೆ. ಸರ್ಕಾರದ ಈ ನಡೆ ಖಂಡಿಸಿ ಕಳೆದ 74 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಸರ್ಕಾರ ಸ್ಪಂದಿಸದ ಕಾರಣ ದೇವನಹಳ್ಳಿಯ ಎಲ್ಲಾ ಸಂಘಟನೆ & ಪಕ್ಷಾತೀತವಾಗಿ ಜನ ದೇವನಹಳ್ಳಿ ಬಂದ್ ಗೆ ಕರೆ ನೀಡಿದ್ದಾರೆ.

ಬಂದ್ ಅಂಗವಾಗಿ ದೇವನಹಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ರೈತ ಮುಖಂಡರು ವಿವಿಧ ಸಂಘಟನೆಗಳ ಹೋರಾಟಗಾರರಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತವಾಯಿತು. ರೈತರ ಬಂದ್ ಗೆ ಬೆಂಬಲ ‌ನೀಡುವಂತೆ ಮೆರವಣಿಗೆಲಿ ಮನವಿ ಮಾಡಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾಹನ ತಡೆದು ರೈತರು ಪ್ರತಿಭಟಿಸಿದರು.

ರೈತ ಹೋರಾಟಗಾರರ ಪಂಜಿನ ಮೆರವಣಿಗೆ ಹಿನ್ನೆಲೆಯಲ್ಲಿ ದೇವನಹಳ್ಳಿ ಇನ್ಸಪೇಕ್ಟರ್ ರಮೇಶ್ ನೇತೃತ್ವದಲ್ಲಿ ಪಂಜಿನ‌ ಮೆರವಣಿಗೆ ತಡೆಯಲು ಪೊಲೀಸರ ಜೀಪನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಯ್ತು. ನೆನ್ನೆಯೇ ರೈತರ ಬಂದ್ ಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂಪೊಲೀಸರ ವಿರೋಧದ ನಡುವೆ ಪಂಜಿನ ಮೆರವಣಿಗೆ ನಡೆಯಿತು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By :
PublicNext

PublicNext

17/06/2022 09:48 am

Cinque Terre

36.51 K

Cinque Terre

0

ಸಂಬಂಧಿತ ಸುದ್ದಿ