ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭೂ ಸ್ವಾಧೀನ ವಿರುದ್ಧ ರೈತರ ಪ್ರತಿಭಟನೆ ಧರಣಿ 74ನೇ ದಿನಕ್ಕೆ; ನಾಳೆ ದೇವನಹಳ್ಳಿ ಬಂದ್ ಗೆ ಕರೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು 3ನೇ ಹಂತದ KOADBಯ 1800 ಎಕರೆ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಕಳೆದ 74 ದಿನಗಳಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಗೆ ಸರ್ಕಾರ ಕ್ಯಾರೇ ಎನ್ನದ ಕಾರಣ ನಾನಾ ಸಂಘಟನೆ, ರಾಜಕೀಯ ಪಕ್ಷಗಳು ನಾಳೆ ದೇವನಹಳ್ಳಿಯ ಸ್ವಯಂಘೋಷಿತ ಬಂದ್ ಗೆ ಕರೆ‌ ನೀಡಿವೆ.

ಗಾರ್ಡನ್ ಸಿಟಿ ಬೆಂಗಳೂರಿನ ಕೂಗಳತೆ ದೂರದ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಕೃಷಿ ಭೂಮಿ ಮೇಲೆ ಕೆಐಎಡಿಬಿ ಕಣ್ಣುಬಿದ್ದಿದೆ. ಏರ್‌ ಪೋರ್ಟ್ ಗೆ 4000 ಎಕರೆ, ಏರೋಸ್ಪೇಸ್ 1500 ಎಕರೆ, SEZ ಗೆ 1300 ಎಕರೆ, ಮತ್ತು ಈಗ ಕೈಗಾರಿಕಾ ಪ್ರದೇಶಾಭಿವೃದ್ಧಿ ಹೆಸರಲ್ಲಿ 1800 ಎಕರೆ ರೈತರ ಜಮೀನು ಭೂಸ್ವಾಧೀನಕ್ಕೆ ಮುಂದಾಗಿದೆ.

ಹೀಗಾಗಿ ಕೆಐಎಡಿಬಿ ಹಾಗೂ ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ನಿರಂತರ 74 ದಿನಗಳಿಂದ ರೈತರು ಪ್ರತಿಭಟನಾ ಧರಣಿ ಮಾಡ್ತಿದ್ದು, ಸರ್ಕಾರ ಕ್ಯಾರೇ ಎಂದಿಲ್ಲ. ಇದ್ರಿಂದ ಜೂ. 17ರಂದು ದೇವನಹಳ್ಳಿ ಬಂದ್ ಗೆ ರೈತರ ಎಲ್ಲಾ ಸಂಘಟನೆ, ರಾಜಕೀಯ ಪಕ್ಷಗಳು, ಶಾಲೆ-ಕಾಲೇಜು, ವ್ಯಾಪಾರಿಗಳು ಎಲ್ಲರೂ ಬೆಂಬಲ ಘೋಷಿಸಿದ್ದಾರೆ.

ಫಲವತ್ತಾದ ಭೂಮಿ ಮೇಲೆ ಸರ್ಕಾರದ ಕೆಂಗಣ್ಣು ಬಿದ್ದಿದೆ. ಸರ್ಕಾರದ ವಿರುದ್ಧ ಹಾಗೂ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ತಿರುಗಿಬಿದ್ದಿದೆ ರೈತಾಪಿ ವರ್ಗ. ರೈತರ ಹೋರಾಟಕ್ಕೆ ಜಯ ಸಿಗುತ್ತಾ !?

- SureshBabu Public Next ದೇವನಹಳ್ಳಿ

Edited By :
PublicNext

PublicNext

17/06/2022 09:25 am

Cinque Terre

32.64 K

Cinque Terre

0

ಸಂಬಂಧಿತ ಸುದ್ದಿ