ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಂಕಿಗಾಹುತಿಯಾಗುವ ಬಿಎಂಟಿಸಿ ಬಸ್ಗಳು- ವಾರದೊಳಗೆ ವರದಿ

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಗಳು ಹೊತ್ತಿ ಉರಿಯುತ್ತಿರುವ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಮೂರು ತಿಂಗಳಲ್ಲಿ ಮೂರು ಬಸ್ಗಳು ಸುಟ್ಟು ಕಲಕಲಾಘಿವೆ.

ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಈ ಬಸ್ ಗಳು ಎಷ್ಟು ಸುರಕ್ಷಿತ? ಎಂಬ ಅನುಮಾನ ಮೂಡಿದೆ.

ಅಶೋಕ್ ಲೇಲ್ಯಾಂಡ್ ಕಂಪನಿಯಲ್ಲಿ ಬಸ್ಗಳ ವಿನ್ಯಾಸದಲ್ಲಿ ಲೋಪದೋಷಗಳಿವೆ. ನಗರದ 48 ಡಿಪೋಗಳಲ್ಲಿ ಬಸ್ ನಿರ್ವಹಣೆಯಲ್ಲಿಯೂ ವೈಫಲ್ಯವಾಗಿದೆ. ಬಸ್ ಡಿಪೋಗಳಿಂದ ಹೊರಬರುವ ಮುನ್ನ ಸರಿಯಾದ ಪರಿಶೀಲನೆ ನಡೆಸುತ್ತಿಲ್ಲ. ಕಳಪೆ ಗುಣಮಟ್ಟದ ಸ್ಪೇರ್ ಪಾರ್ಟ್ಸ್ ಖರೀದಿಸಲಾಗುತ್ತಿದೆ. ಬಿಸಿಲಿನ ಧಗೆಯಿಂದ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಮೂರು ತಿಂಗಳ ಅಂತರದಲ್ಲೇ 3 ಬಿಎಂಟಿಸಿ ಬಸ್ಗಳು ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್ನಿಂದ ಸಾಕಷ್ಟು ಬಾರಿ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಸಾರಿಗೆ ನೌಕರರು ನಿಗಮದ ನಿರ್ಲಕ್ಷ್ಯದ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆಯುತ್ತಿವೆ. ಸಮಗ್ರವಾಗಿ ಒಂದು ವಾರದ ಒಳಗೆ ವರದಿ ನೀಡಲಾಗುತ್ತದೆ ಎಂದರು.

Edited By : Manjunath H D
PublicNext

PublicNext

11/04/2022 07:25 pm

Cinque Terre

38.82 K

Cinque Terre

0

ಸಂಬಂಧಿತ ಸುದ್ದಿ