ಆನೇಕಲ್ :ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಮ್ಮ ಕಲ್ಯಾಣಿ ಬಳಗ ವತಿಯಿಂದ ವಿದ್ಯಾರ್ಥಿಗಳ ಹಾಡು ಕವಿತೆ ಮಾತು ಕಾರ್ಯಕ್ರಮವನ್ನು ಆನೇಕಲ್ ಸಂತೆ ಬೀದಿಯಲ್ಲಿರುವ ಚಿಕ್ಕೆರೆ ಬಳಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಪನ್ಯಾಸಕಿ ಶ್ರೀಮತಿ ರುದ್ರಾಣಿ ಮಾಡಿದರು.
ಕಾರ್ಯಕ್ರಮನ್ನು ಭಾಗಿಯಾಗಿ ಮಾತನಾಡಿದ ಉಪನ್ಯಾಸಕಿ ರುದ್ರಾಣಿ ಸಮಾಜದಲ್ಲಿ ಭರಪೂರವಾದ ಅವಕಾಶಗಳು ನಮ್ಮ ಕಣ್ಮುಂದಿವೆ ಅವುಗಳನ್ನು ತಪ್ಪದೇ ಎಲ್ಲರೂ ಸದುಪಯೊಗಿಸಿಕೊಂಡಾಗ ಮಹಿಳೆಯರು ಸಾಧಕರಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.
ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಚಂದ್ರಶೇಖರ್ ಮಾತನಾಡಿ ವಿದ್ಯಾರ್ಥಿಗಳು ಕನಸು ಕಾಣುತ್ತಾ ಸುಮ್ಮನಿರದೆ ಅವುಗಳನ್ನು ನನಸು ಮಾಡಿಕೊಳ್ಳುವಲ್ಲಿ ಶ್ರಮವಹಿಸಬೇಕು ಆಗಲೇ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲುಗಳು ಏರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Kshetra Samachara
10/06/2022 10:28 pm