ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣಾ ರೀತಿ- ನೀತಿ, ಸಮಿತಿಯನ್ನ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ..
ಇಂದು ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭುಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶ್ರೀಗಳು ಪಠ್ಯಪುಸ್ತಕ ಪಠ್ಯಪುಸ್ತಕ ಪರಿಷ್ಕರಣೆ ಎನ್ನುವುದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅದು ಪರಿಣಾಮ ಬೀರುತ್ತದೆ.
ಇಂತಹ ವಿಚಾರಗಳಲ್ಲಿ ಸರ್ಕಾರ ಎಚ್ಚರಿಕಯ ಹೆಜ್ಜೆಯನ್ನಿಡಬೇಕು. ಇಂತಹ ಸಮಿತಿ ಗಳಿಗೆ ಅಧ್ಯಕ್ಷರನ್ನು ನೇಮಕಮಾಡುವಾಗ ಪ್ರಾಜ್ಞರು, ಜ್ಞಾನಿಗಳನ್ನು,ಅಧ್ಯಯನ ಶೀಲರನ್ನು ನೇಮಕ ಮಾಡಬೇಕು ಅದಲ್ಲದೇ ಈಗಿನ ಸರ್ಕಾರ ನೇಮಕ ಮಾಡಿದಂತವರನ್ನು ನೇಮಕ ಮಾಡಿದರೆ ಆಗಬಾರದ್ದು ಆಗುತ್ತದೆ..
ಸೂಕ್ಷ್ಮ ಮನಸ್ಸಿನ ಸಿಎಂ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಅಂದುಕೊಂಡಿದ್ದೇನೆ ಎಂದು ಹೇಳಿದ್ರು...
- ಪ್ರವೀಣ್ ನಾರಾಯಣ್ ರಾವ್
PublicNext
27/06/2022 04:55 pm